ಗಾಯಕರೂ ಆಗಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳು

Webdunia
ಶುಕ್ರವಾರ, 23 ಜೂನ್ 2023 (09:10 IST)
Photo Courtesy: facebook
ಬೆಂಗಳೂರು: ಸ್ಯಾಂಡಲ್ ವುಡ್ ನಟರು ಕೇವಲ ಅಭಿನಯದಲ್ಲಿ ಮಾತ್ರವಲ್ಲ, ಹಾಡುವುದರಲ್ಲೂ ಎತ್ತಿದ ಕೈ ಎಂದು ನಿರೂಪಿಸಿದ್ದಾರೆ. ಡಾ.ರಾಜ್ ಕುಮಾರ್ ಅವರಿಗಿಂತ ದೊಡ್ಡ ಉದಾಹರಣೆ ಬೇಕೇ?

ಡಾ.ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲೂ ಡಾ.ರಾಜ್ ಕುಮಾರ್ ಕಂಠ ಸಿರಿ ಎಲ್ಲರಿಗೂ ಗೊತ್ತಿರುವುದೇ.

ಇವರ ಹೊರತಾಗಿ ಡಾ.ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಕೂಡಾ ಚೆನ್ನಾಗಿ ಹಾಡುತ್ತಾರೆ. ಹಿರಿಯ ನಟ ಅಭಿಜಿತ್, ರವಿಶಂಕರ್ ಗೌಡ, ಶರಣ್, ಶ್ರೀಮುರಳಿ, ಕಿಚ್ಚ ಸುದೀಪ್, ವಸಿಷ್ಠ ಸಿಂಹ, ನೆನಪಿರಲಿ ಪ್ರೇಮ್ ಮುಂತಾದವರು ತಮ್ಮಲ್ಲಿ ಗಾಯನ ಪ್ರತಿಭೆಯೂ ಇದೆ ಎಂದು ಸಾಬೀತುಪಡಿಸಿದ್ದಾರೆ. ಅಷ್ಟೇ ಏಕೆ ರಾಕಿಂಗ್ ಸ್ಟಾರ್ ಯಶ್ ಕೂಡಾ ತಮ್ಮ ಸಿನಿಮಾಗೆ ಹಾಡಿ ಫೇಮಸ್ ಆಗಿದ್ದರು.

ಈ ಪೈಕಿ ಡಾ.ರಾಜ್ ಕುಮಾರ್, ಡಾ. ಪುನೀತ್ ರಾಜ್ ಕುಮಾರ್, ಶರಣ್, ‍ಶ್ರೀಮುರಳಿ, ವಸಿಷ್ಠ ಸಿಂಹ ಬೇರೆಯವರ ಸಿನಿಮಾಗಳಿಗೂ ಹಾಡಿ ಹಿಟ್ ಆಗಿದ್ದರು. ಹಿರಿಯ ನಟ ಅಭಿಜಿತ್, ರವಿಶಂಕರ್ ಗೌಡ ಖಾಸಗಿ ವಾಹಿನಿಯೊಂದಕ್ಕೆ ಒಂದು ಕಾಲದಲ್ಲಿ ಹಾಡಿನ ಕಾರ್ಯಕ್ರಮವನ್ನೇ ಮಾಡುತ್ತಿದ್ದರು. ಇವರೆಲ್ಲಾ ನಟನೆ ಜೊತೆಗೆ ಗಾಯಕರಾಗಿಯೂ ತಾವು ಅತ್ಯುತ್ತಮ ಎಂದು ನಿರೂಪಿಸಿದವರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಮುಂದಿನ ಸುದ್ದಿ
Show comments