Select Your Language

Notifications

webdunia
webdunia
webdunia
webdunia

ಇಂದು (ಜ.29) ಸಮಂತಾ, ನಾಗಚೈತನ್ಯ ನಿಶ್ಚಿತಾರ್ಥ

ಇಂದು (ಜ.29) ಸಮಂತಾ, ನಾಗಚೈತನ್ಯ ನಿಶ್ಚಿತಾರ್ಥ
Hyderabad , ಭಾನುವಾರ, 29 ಜನವರಿ 2017 (09:03 IST)
ಟಾಲಿವುಡ್‍ನಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದೆ. ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ನಿಶ್ಚಿತಾರ್ಥ ಇಂದು (ಜ.29) ನಡೆಯಲಿದೆ. ನಟಿ ಸಮಂತಾ ಅವರನ್ನು ವರಿಸಲಿದ್ದಾರೆ ನಾಗಚೈತನ್ಯ. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್.
 
ಈಗಾಗಲೆ ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆಯಂತೆ. ಅಕ್ಕಿನೇನಿ, ಕೋಣಿದೆಲ, ಭೂಪಾಲ್, ಪ್ರಭು ಕುಟುಂಬಗಳ ಜತೆಗೆ ಇನ್ನಷ್ಟು ಸೆಲೆಬ್ರಿಟಿಗಳು ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. 
 
ಅಕ್ಕಿನೇನಿ ನಾಗಾರ್ಜುನ ಮಗ ಅಕ್ಕಿನೇನಿ ಅಖಿಲ್ ನಿಶ್ಚಿತಾರ್ಥ ಶ್ರೀಯಾ ಭೂಪಾಲ್ ಜತೆ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಇಟಲಿಯಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಇನ್ನು ನಾಗಚೈತನ್ಯ ಮತ್ತು ಸಮಂತಾ ಮದುವೆಯೂ ಅಷ್ಟೇ ಅದ್ದೂರಿಯಾಗಿ ಮಾಡಲು ನಾಗಾರ್ಜುನ ನಿರ್ಧರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾ ಚೋಪ್ರಾ ಪ್ರಿಯಕರ ಇವನೇನಾ?