Select Your Language

Notifications

webdunia
webdunia
webdunia
webdunia

ತೆರಿಗೆ ಕಟ್ಟುವುದರಲ್ಲೂ ಸುಲ್ತಾನ್ ಎಂದು ಸಾಬೀತುಪಡಿಸಿದ ಸಲ್ಮಾನ್ ಖಾನ್

ತೆರಿಗೆ ಕಟ್ಟುವುದರಲ್ಲೂ ಸುಲ್ತಾನ್ ಎಂದು ಸಾಬೀತುಪಡಿಸಿದ ಸಲ್ಮಾನ್ ಖಾನ್
ಮುಂಬೈ , ಬುಧವಾರ, 22 ಮಾರ್ಚ್ 2017 (08:34 IST)
ಸಲ್ಮಾನ್ ಖಾನ್ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದು ಎಲ್ಲರಿಗೂ ಗೊತ್ತು. ಸಲ್ಲೂ ಮಾಡುವ ಪ್ರತಿಯೊಂದು ಸಿನಿಮಾ ಗಳಿಕೆಯಲ್ಲಿ 100 ಕೋಟಿ ರೂ. ದಾಟುತ್ತಿವೆ. ಗಳಿಕೆಯಲ್ಲಷ್ಟೇ ಅಲ್ಲ, ಸರ್ಕಾರಕ್ಕೆ ತೆರಿಗೆ ಕಟ್ಟುವುದರಲ್ಲೂ ನಾನೂ ನಂಬರ್ ಒನ್ ಎನ್ನುವುದನ್ನ ಸಲ್ಲೂ ಸಾಬೀತುಪಡಿಸಿದ್ದಾರೆ.

2016-17ರ ಆರ್ಥಿಕ ವರ್ಷದ ಅಂತ್ಯಕ್ಕೆ ಅತ್ಯಧಿಕ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿದ ನಾಯಕ ಎಂಬ ಖ್ಯಾತಿಗೆ ಸಲ್ಲೂ ಪಾತ್ರರಾಗಿದ್ದಾರೆ. ಅಕ್ಷಯ್, ಹೃತಿಕ್`ರನ್ನೂ ಸಲ್ಲೂ ಹಿಂದಿಕ್ಕಿದ್ದಾರೆ. ಇನ್ನೂ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ತೆರಿಗೆ ಮಟ್ಟ ಶೇ. 206ರಷ್ಟು ಏರಿಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆದರೆ, ಪನಾಮಾ ಪೇಪರ್ ಲೀಕ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಶಾರೂಕ್, ಐಶ್ವರ್ಯ ರೈ ಮತ್ತು ಅಮಿತಾಬ್ ಬಚ್ಚನ್ ತೆರಿಗೆ ವಿವರ ಘೋಷಣೆಗೆ ಆದಾಯ ತೆರಿಗೆ ಇಲಾಖೆ ನಿರಾಕರಿಸಿದೆ.

-     2016-17ನೇ ಆರ್ಥಿಕ ವರ್ಷದಲ್ಲಿ ಸಲ್ಮಾನ್ ಖಾನ್ 44.5 ಕೋಟಿ ರೂ. ಮುಂಗಡ ತೆರಿಗೆ ಕಟ್ಟಿದ್ದಾರೆ. ಕಳೆದ 32.2 ಕೋಟಿ ರೂ. ಮುಂಗಡ ತೆರಿಗೆ ಕಟ್ಟಿದ್ದ ಸಲ್ಲೂ ಈ ವರ್ಷ ಶೇ.39ರಷ್ಟು ಆದಾಯ ಹೆಚ್ಚಿಸಿಕೊಂಡಿದ್ದು  12 ಕೋಟಿ ರೂ. ಹೆಚ್ಚುವರಿ ಟ್ಯಾಕ್ಸ್ ಕಟ್ಟಿದ್ದಾರೆ.

-     ಇನ್ನೂ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ 29.5 ಕೋಟಿ ರೂ. ಮುಂಗಡ ತೆರಿಗೆ ಪಾವತಿಸಿದ್ದಾರೆ. ಹೃತಿಕ್ ರೋಶನ್ 25.5 ಕೋಟಿ ರೂ. ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಿದ್ದಾರೆ. ಕಳೆದ ವರ್ಷ 14 ಕೋಟಿ ರೂ. ಪಾವತಿಸಿದ್ದ ಹೃತಿಕ್ ಟ್ಯಾಕ್ಸ್ ಮೊತ್ತ ಶೇ.74ರಷ್ಟು ಏರಿಕೆಯಾಗಿದೆ.

-     ಇನ್ನೂ ಕಾಮಿಡಿಯನ್ ಕಮ್ ನಟ ಕಪಿಲ್ ಶರ್ಮಾ ತೆರಿಗೆ ಇಲಾಖೆಗೆ ಸರ್ ಪ್ರೈಸ್ ನೀಡಿದ್ದಾರೆ. ಕಳೆದ ವರ್ಷ 7 ಕೋಟಿ ರೂ. ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಿದ್ದ ಕಪಿಲ್ ಶರ್ಮಾ ಈ ವರ್ಷ ಬರೋಬ್ಬರಿ 23.9 ಕೋಟಿ ರೂ. ಪಾವತಿಸಿದ್ದಾರೆ.

ಉಳಿದಂತೆ ರಣಬೀರ್ ಕಪೂರ್ ಆದಾಯ ಕುಸಿದಿದ್ದು ಈ ವರ್ಷ 16.5 ಕೋಟಿ ರೂ. ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿದ್ದಾರೆ. ಕಳೆದ ವರ್ಷ ರಣಬೀರ್ 22 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದರು. ಮಿಸ್ಟರ್ ಪರ್ಫೆಕ್ಚನಿಸ್ಟ್ ಅಮೀರ್ ಖಾನ್ 14.8 ಕೋಟಿ ರೂ. ಮುಂಗಡ ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷ 9.6 ಕೋಟಿ ರೂ. ತೆರಿಗೆ ಕಟ್ಟಿದ್ದ ಅಮೀರ್ ಆದಾಯ ಶೇ.54ರಷ್ಟು ಏರಿಕೆ ಕಂಡಿದೆ. ಕರಣ್ ಜೋಹರ್ 4 ಕೋಟಿ ರೂ. ಮುಂಗಡ ತೆರಿಗೆ ಪಾವತಿಸಿದ್ದಾರೆ.

 
 
1.  

Share this Story:

Follow Webdunia kannada

ಮುಂದಿನ ಸುದ್ದಿ

ಹೆತ್ತವರು ಯಾರೆಂಬ ಪ್ರಕರಣದಲ್ಲಿ ಧನುಷ್ ನಿರಾಳ