Select Your Language

Notifications

webdunia
webdunia
webdunia
webdunia

ಸೈಫ್ ಆಲಿಖಾನ್ ಅವರು ತರಾತುರಿಯಲ್ಲಿ ಆಸ್ಪತ್ರೆಗೆ ಧಾವಿಸಿದ್ದ್ಯಾಕೆ?

ಸೈಫ್ ಆಲಿಖಾನ್ #ಆಸ್ಪತ್ರೆ #ಹೆಬ್ಬೆರಳು# ಗಾಯ# ರಂಗೂನ್ #ಶೂಟಿಂಗ್Saif Alikhan# Hospital# Thumb# Injure# Rangoon# Shooting
, ಸೋಮವಾರ, 27 ಜೂನ್ 2016 (09:24 IST)
ಸಿನಿಮಾ ತಾರೆಯರು ಪ್ರೇಕ್ಷಕರನ್ನು ಎರಡೂವರೆ ಗಂಟೆಗಳ ಕಾಲ ರಂಜಿಸೋದಕ್ಕಾಗಿ ಎಷ್ಟೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಅದಕ್ಕೆ ಅವರೆಷ್ಟು ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತಾರೆ ಅನ್ನೋದು ಅವರಿಗಷ್ಟೇ ಗೊತ್ತು . ನಟ ಸೈಫ್ ಆಲಿಖಾನ್ ಅವರು ಕೂಡ ಇತ್ತೀಚೆಗೆ ಶೂಟಿಂಗ್ ವೇಳೆ ಇದೇ ರೀತಿ ರಿಸ್ಕ್ ತೆಗೆದುಕೊಳ್ಳಲು ಹೋಗಿ ಗಾಯಗೊಂಡಿದ್ದಾರೆ.

ರಂಗೂನ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಸೈಫ್ ಆಲಿಖಾನ್ ಅವರು ಮೊನ್ನೆ ಇದ್ದಕ್ಕಿದ್ದಂತೆ ಕೋಲ್ಕತ್ತಾದ ಕೋಕಿಲ್ ಬೆನ್ ಆಸ್ಪತ್ರೆಗೆ ದೌಡಾಯಿಸಿದ್ದರು. ಸೈಫ್ ಆಲಿಖಾನ್ ಅವರು ಆಸ್ಪತ್ರೆಗೆ ಹೀಗೆ ಏಕಾಏಕಿ ಧಾವಿಸಿ ಬಂದಿದ್ದು ನೋಡಿ ಎಲ್ಲರೂ ಗಾಬರಿಗೊಂಡಿದ್ದರು.
 
ಬಾಲಿವುಡ್ ಮಂದಿಗೂ ಸುದ್ದಿ ಮುಟ್ಟಿತ್ತು. ಅವರೆಲ್ಲಾ ಸೈಫ್ ಯಾಕಪ್ಪಾ ಹೀಗೆ ಆಸ್ಪತ್ರೆಗೆ ಓಡೋಡಿ ಬಂದ್ರು ಅಂತಾ ಗಾಬರಿಯಲ್ಲಿರುವಾಗ ಸೈಫ್ ಸಹೋದರಿ ಸೋಹಾ ಆಲಿಖಾನ್ ಅವರು ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ರು.ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ ರಂಗೂನ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಸೈಫ್ ಆಲಿಖಾನ್ ಅವರು ಶೂಟಿಂಗ್ ವೇಳೆ ತಮ್ಮ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದರು. ಅದಕ್ಕೆ ಚಿಕಿತ್ಸೆ ಪಡೆಯೋದಕ್ಕಾಗಿ ಅವರು ಆಸ್ಪತ್ರೆಗೆ ಆಗಮಿಸಿದ್ದರು.
 
ಸದ್ಯ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿರುವ ಸೈಫ್ ಆಲಿಖಾನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಸೋಹ ಆಲಿಖಾನ್ ಅವರೇ ತಿಳಿಸಿದ್ದಾರೆ.ಅಲ್ಲದೇ ಸೈಫ್ ಆಲಿಖಾನ್ ಅವರ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಸೋಹಾ ಆಲಿಖಾನ್ ಧನ್ಯವಾದ ಅರ್ಪಿಸಿದ್ದಾರೆ.ಅಲ್ಲದೇ ಸೈಫ್ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. ರಂಗೂನ್ ಸಿನಿಮಾದಲ್ಲಿ ಸೈಫ್ ಆಲಿಖಾನ್, ಶಾಹೀದ್ ಕಪೂರ್ ಹಾಗೂ ಕಂಗನಾ ಅವರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೀಕ್ರೆಟ್ ಆಗಿ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ ಆಲಿಯಾ ಹಾಗೂ ಸಿದ್ಧಾರ್ಥ್