Webdunia - Bharat's app for daily news and videos

Install App

ಕಿಸ್ ಟ್ರೇಲರ್ ಲಾಂಚ್ ಮಾಡಲಿದ್ದಾರೆ ರಾಕಿ ಭಾಯ್!

Webdunia
ಶುಕ್ರವಾರ, 23 ಆಗಸ್ಟ್ 2019 (14:49 IST)
ಈಗಾಗಲೇ ಮುದ್ದಾದ ಹಾಡುಗಳ ಮೂಲಕ ಕಿಸ್ ಚಿತ್ರ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿದೆ. ಈ ಹಾಡುಗಳ ದೃಷ್ಯ ವೈಭವ, ಸಾಹಿತ್ಯ, ಸಂಗೀತಗಳೆಲ್ಲವೂ ಶಹಬ್ಬಾಸ್‌ಗಿರಿ ಪಡೆದುಕೊಳ್ಳುತ್ತಿವೆ.

ಅಂಬಾರಿಯಿಂದ ಆರಂಭವಾಗಿದ್ದ ನಿರ್ದೇಶಕ ಎ.ಪಿ ಅರ್ಜುನ್ ಅವರ ಪ್ರೀತಿಯ ಮೆರವಣಿಗೆ ಕಿಸ್ ಮೂಲಕವೂ ಯಶಸ್ವಿಯಾಗಿ ಸಾಗಿ ಬಂದಿದೆ. ಎಲ್ಲರೂ ಬಿಡುಗಡೆ ಯಾವತ್ತು ಅಂತ ಕೇಳುತ್ತಿರುವಾಗಲೇ ಕಿಸ್ ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಭಾಯ್ ಯಶ್ ಇಂದು ಬಿಡುಗಡೆಗೊಳಿಸಲಿದ್ದಾರೆ.
ಕಿಸ್ ಚಿತ್ರದ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಇಂದು ಬಿಡುಗಡೆಗೊಳಿಸಲಿದ್ದಾರೆ. ಈ ಮೂಲಕ ರಾಕಿಂಗ್ ಸ್ಟಾರ್ ಕಿಸ್ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಅಷ್ಟಕ್ಕೂ ಯಶ್ ಮತ್ತು ಎ.ಪಿ ಅರ್ಜುನ್ ನಡುವೆ ವರ್ಷಾಂತರಗಳ ಸ್ನೇಹವಿದೆ. ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಕಿಸ್ ಚಿತ್ರ ಈಗಾಗಲೇ ಸೃಷ್ಟಿಸಿರೋ ಸಂಚಲನ, ಅದರ ಬಗ್ಗೆ ಕೇಳಿ ಬರುತ್ತಿರೋ ಸದಾಭಿಪ್ರಾಯಗಳನ್ನು ಕಂಡು ಯಶ್ ಕೂಡಾ ಖುಷಿಗೊಂಡಿದ್ದಾರೆ. ಇದೀಗ ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರೂ ಬಿಡುವು ಮಾಡಿಕೊಂಡು ಟ್ರೇಲರ್ ಲಾಂಚ್ ಮಾಡುವ ಮೂಲಕ ಕಿಸ್ ಚಿತ್ರಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ.
ಇದುವರೆಗೂ ಈ ಸಿನಿಮಾದ ಒಂದಷ್ಟು ಹಾಡುಗಳು ಬಿಡುಗಡೆಯಾಗಿ ಟ್ರೆಂಡಿಂಗ್ನಲ್ಲಿದ್ದರೂ, ಮೋಹಕ ಪೋಸ್ಟರ್ಗಳು ಸದ್ದು ಮಾಡಿರೂ ಕಥೆ ಎಂಥಾದ್ದೆಂಬ ವಿಚಾರವನ್ನು ಮಾತ್ರ ಎ.ಪಿ ಅರ್ಜುನ್ ಗೌಪ್ಯವಾಗಿಟ್ಟಿದ್ದಾರೆ. ಕಿಸ್ ಎಂಬ ಟೈಟಲ್, ತುಂಟ ತುಟಿಗಳ ಆಟೋಗ್ರಾಫ್ ಎಂಬ ಟ್ಯಾಗ್ಲೈನ್ ಇದೊಂದು ಪ್ರೇಮಕಥೆ ಅನ್ನೋದನ್ನು ಸಾಬೀತುಪಡಿಸುವಂತಿದೆ. ಆದರೆ ಇದರಾಚೆಗೂ ಇದರಲ್ಲಿನ ಕಥೆ ಹರಡಿಕೊಂಡಿದೆಯೆಂಬುದೂ ಕೂಡಾ ಅಷ್ಟೇ ಸತ್ಯ. ಇಂದು ಬಿಡುಗಡೆಯಾಗಲಿರೋ ಟ್ರೇಲರ್ ಅದಕ್ಕೆ ಕನ್ನಡಿಯಾಗಲಿದೆಯಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಮುಂದಿನ ಸುದ್ದಿ
Show comments