ಸಲಾರ್ ನಲ್ಲಿ ರಾಕಿ ಭಾಯಿ ಯಶ್! ಬಾಯ್ತಪ್ಪಿ ಸತ್ಯ ಹೊರಹಾಕಿದ ಗಾಯಕಿ!

Webdunia
ಬುಧವಾರ, 13 ಡಿಸೆಂಬರ್ 2023 (10:40 IST)
Photo Courtesy: Twitter
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಪಾರ್ಟ್ 1 ಸಿನಿಮಾದಲ್ಲಿ ರಾಕಿ ಭಾಯಿ ಯಶ್ ಇರಲಿದ್ದಾರಾ?

ಹೀಗೊಂದು ಅನುಮಾನ ಅಭಿಮಾನಿಗಳಿಗೆ ಬಹಳ ದಿನಗಳಿಂದ ಇದೆ. ಕೆಲವರು ಈ ಸಿನಿಮಾದಲ್ಲಿ ಯಶ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಎಂದು ಅಂದುಕೊಂಡಿದ್ದು ಇದೆ. ಅದೀಗ ನಿಜವಾಗುವ ಲಕ್ಷಣವಿದೆ.

ಸಲಾರ್ ಸಿನಿಮಾದಲ್ಲಿ ಹಾಡಿರುವ ಗಾಯಕಿ ತೀರ್ಥ ಸುಭಾ಼ಷ್ ಇತ್ತೀಚೆಗೆ ಬಾಯ್ತಪ್ಪಿ ಈ ವಿಚಾರವನ್ನು ಹೊರಹಾಕಿದ್ದಾರೆ. ಸಲಾರ್ ನಲ್ಲಿ ಕೆಜಿಎಫ್ ಸ್ಟಾರ್ ರಾಕಿ ಭಾಯಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಸುಳಿವು ನೀಡಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ತೀರ್ಥ ಸಲಾರ್ ಸಿನಿಮಾ ಬಗ್ಗೆ ಮಾತನಾಡುವಾಗ ‘ಪ್ರಭಾಸ್ ಅಂಕಲ್, ಪೃಥ್ವಿರಾಜ್ ಅಂಕಲ್ ಮತ್ತು ಯಶ್ ಅಂಕಲ್’ ಎಂದು ಉಲ್ಲೇಖಿಸಿದ್ದರು. ಆದರೆ ತೀರ್ಥ ಹೇಳಿಕೆ ವೈರಲ್ ಆಗುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆಯನ್ನೂ ಕೊಟ್ಟರು. ಕೆಜಿಎಫ್ ಸಿನಿಮಾವನ್ನು ಬಹಳ ಬಾರಿ ನೋಡಿದ್ದೆ. ನನಗೆ ಅವಕಾಶ ಬಂದಾಗ ನನ್ನ ತಂದೆ ಕೆಜಿಎಫ್ ತಂಡವೇ ಸಲಾರ್ ಗೂ ಸಂಗೀತ ನೀಡುತ್ತಿದೆ ಎಂದಿದ್ದರು. ಅದೇ ಭರದಲ್ಲಿ ಯಶ್ ಹೆಸರು ಹೇಳಿದ್ದೆ’ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಬಾಯ್ತಪ್ಪಿನಿಂದ ಬಂದಿದ್ದೋ, ನಿಜವಾಗಿಯೋ ಯಶ್ ಇದ್ದಾರೋ ಗೊತ್ತಿಲ್ಲ. ಯಶ್ ಅಭಿಮಾನಿಗಳಂತೂ ಈಗಲೇ ಸಲಾರ್ ನಲ್ಲಿ ರಾಕಿ ಭಾಯಿ ನೋಡಬಹುದು ಎಂಬ ಕುತೂಹಲದಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಪುನೀತ್ ರಾಜ್ ಕುಮಾರ್ ನಾಲ್ಕನೇ ಪುಣ್ಯ ತಿಥಿ: ಅಪ್ಪು ನೆನಪಿನಲ್ಲಿ ಅಶ್ವಿನಿ ಪುನೀತ್ ಹೇಳಿದ್ದೇನು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments