Publish Date: Mon, 24 Aug 2020 (12:26 IST)
Updated Date: Mon, 24 Aug 2020 (12:26 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಮಾಡಿದ ಮೇಲೆ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಆದರೆ ಕನ್ನಡ ಮರೆತರಾ? ಈ ಒಂದು ವಿಚಾರಕ್ಕೆ ಯಶ್ ಈಗ ಟ್ರೋಲ್ ಆಗಿದ್ದಾರೆ.
ಗಣೇಶ ಹಬ್ಬಕ್ಕೆ ಯಶ್ ಸಾಮಾಜಿಕ ಜಾಲತಾಣದಲ್ಲಿ ಶುಭ ಸಂದೇಶ ಬರೆಯುವಾಗ ಇಂಗ್ಲಿಷ್ ನಲ್ಲೇ ಬರೆದಿದ್ದರು. ಇದೇ ವಿಚಾರಕ್ಕೆ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡಿದ್ದು, ಕನ್ನಡ ಕನ್ನಡ ಹೇಳುವ ನೀವೇ ಕನ್ನಡವನ್ನು ಬರೆಯದೇ ಬೇರೆ ಭಾಷೆಯವರಿಗೆ ಬೇಕಾಗಿ ಆಂಗ್ಲ ಭಾಷೆಯಲ್ಲಿ ಬರೆದರೆ ಕನ್ನಡವನ್ನು ಬೆಳೆಸುವವರು ಯಾರು ಎಂದು ಹಲವರು ಕಾಮೆಂಟ್ ಮೂಲಕ ಯಶ್ ಗೆ ಪ್ರಶ್ನೆ ಮಾಡಿದ್ದಾರೆ. ಈ ಮೊದಲೂ ಯಶ್-ರಾಧಿಕಾ ಇದೇ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.