Select Your Language

Notifications

webdunia
webdunia
webdunia
webdunia

ನೀ ಬಳಿಯಿದ್ದರೆ ಮಾತ್ರ ಜಗತ್ತು ಸುಂದರ: ರಾಧಿಕಾಗೆ ಯಶ್ ಪ್ರೇಮ ಸಂದೇಶ

ನೀ ಬಳಿಯಿದ್ದರೆ ಮಾತ್ರ ಜಗತ್ತು ಸುಂದರ: ರಾಧಿಕಾಗೆ ಯಶ್ ಪ್ರೇಮ ಸಂದೇಶ
ಬೆಂಗಳೂರು , ಗುರುವಾರ, 9 ಡಿಸೆಂಬರ್ 2021 (16:30 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಜೋಡಿ ಇಂದು ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ದಿನದಂದು ಯಶ್-ರಾಧಿಕಾ ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶದ ಮೂಲಕ ವಿಶ್ ಮಾಡಿಕೊಂಡಿದ್ದಾರೆ.

ಮೊದಲು ರಾಧಿಕಾ ಸರದಿ. ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ್ದ ರಾಧಿಕಾ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಹೇಳಿದ್ದಾರೆ.

ಇದಾದ ಬಳಿಕ ಯಶ್ ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಜೊತೆಗಿನ ಫೋಟೋ ಜೊತೆಗೆ ಸಂದೇಶ ಬರೆದಿದ್ದು, ನೀನು ಜೊತೆಗಿದ್ದರೆ ಮಾತ್ರ ನನಗೆ ಜಗತ್ತು ಸುಂದರವಾಗಿರುತ್ತದೆ. ಎಂದೆಂದಿಗೂ ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ. ಇನ್ನು, ರಾಕಿಂಗ್ ಜೋಡಿಗೆ ನೆಟ್ಟಿಗರು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭರ್ಜರಿಯಾಗಿ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ನಟಿ ಉಮಾಶ್ರೀ