Webdunia - Bharat's app for daily news and videos

Install App

ಚುನಾವಣೆ ಪ್ರಚಾರಕ್ಕೆ ಹೋಗ್ತಾರಾ ರಾಕಿಂಗ್ ಸ್ಟಾರ್ ಯಶ್

Krishnaveni K
ಗುರುವಾರ, 15 ಫೆಬ್ರವರಿ 2024 (11:32 IST)
Photo Courtesy: Twitter
ಬೆಂಗಳೂರು: ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲಾ ಪಕ್ಷಗಳೂ, ಅಭ್ಯರ್ಥಿಗಳೂ ತಮ್ಮ ಪರವಾಗಿ ಪ್ರಚಾರ ಮಾಡಲು ಸಿನಿಮಾ ಸ್ಟಾರ್ ಗಳನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ.

ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಗೆ ಚುನಾವಣಾ ಪ್ರಚಾರಕ್ಕೆ ಹೋಗ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಏನು ಉತ್ತರಿಸಿದ್ದಾರೆ ನೋಡಿ. ಸ್ನೇಹಿತ ಸೆಲೆಬ್ರಿಟಿ ಟ್ರೈನರ್ ಕಿಟ್ಟಿ ಅವರ ಜಿಮ್ ಉದ್ಘಾಟನೆಗೆಂದು ಕತ್ರಿಗುಪ್ಪೆಗೆ ಬಂದಿದ್ದಾಗ ಮಾಧ್ಯಮಗಳು ಯಶ್ ಗೆ ಈ ಬಾರಿಯೂ ಮಂಡ್ಯ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಯಶ್, ಇದನ್ನೇ ಮಾಡುತ್ತಾ ಕೂರಬೇಕಾ? ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ. ನನ್ನ ಗುರಿ ಬೇರೆಯೇ ಇದೆ’ ಎಂದಿದ್ದಾರೆ. ಆ ಮೂಲಕ ಈ ಬಾರಿ ಯಾವುದೇ ಅಭ್ಯರ್ಥಿ ಪರ ಅಥವಾ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಕಳೆದ ಬಾರಿ 2019 ರ ಲೋಕಸಭೆ ಚುನಾವಣೆ ವೇಳೆ ಯಶ್ ಮತ್ತು ದರ್ಶನ್ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಪರ ಜೋಡೆತ್ತುಗಳಂತೆ ಪ್ರಚಾರ ನಡೆಸಿದ್ದರು. ಬಿಸಿಲು ಲೆಕ್ಕಿಸದೇ ಇಬ್ಬರೂ ಸ್ಟಾರ್ ನಟರು ಪ್ರಚಾರ ನಡೆಸಿದ್ದರಿಂದ ಸುಮಲತಾ ಪ್ರಚಂಡ ಗೆಲುವು ಕಂಡಿದ್ದರು. ಈ ಬಾರಿಯೂ ಮಂಡ್ಯ ಕ್ಷೇತ್ರದಲ್ಲಿ ಸುಮಲತಾಗೆ ಟಿಕೆಟ್ ಸಿಕ್ಕರೆ ಪ್ರಚಾರ ನಡೆಸುವ ಬಗ್ಗೆ ಪತ್ರಕರ್ತರು ಯಶ್ ಗೆ ಪ್ರಶ್ನೆ ಕೇಳಿದ್ದರು. ಆದರೆ ಅದನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

₹72 ಕೋಟಿ ಆಸ್ತಿಯನ್ನು ಸಂಜಯ್‌ ದತ್‌ಗೆ ಬಿಟ್ಟು ಹೋದ ಮಹಿಳಾ ಅಭಿಮಾನಿ, ನಟ ಅದನ್ನೇನು ಮಾಡಿದ್ರೂ ಗೊತ್ತಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ಮುಂದಿನ ಸುದ್ದಿ
Show comments