ರಿಷಬ್ ಶೆಟ್ಟಿಗೆ ಪ್ರಶಸ್ತಿ ಬಂದಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಎಷ್ಟು ಖುಷಿಯಾದ್ರು ನೋಡಿ

Krishnaveni K
ಶುಕ್ರವಾರ, 16 ಆಗಸ್ಟ್ 2024 (16:26 IST)
ಬೆಂಗಳೂರು: 70 ನೇ ನ್ಯಾಷನಲ್ ಅವಾರ್ಡ್ ಪ್ರಕಟವಾಗಿದ್ದು ಕಾಂತಾರ ಸಿನಿಮಾದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶ್ತಿ ಪಡೆದಿದ್ದಾರೆ. ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ತುಂಬಾ ಖುಷಿಪಟ್ಟಿದ್ದಾರೆ.

ರಾಷ್ಟ್ರ ಪ್ರಶಸ್ತಿ ರೇಸ್ ನಲ್ಲಿ ಕಾಂತಾರ ಜೊತೆಗೆ ಯಶ್ ನಾಯಕರಾಗಿದ್ದ ಕೆಜಿಎಫ್ 2 ಕೂಡಾ ರೇಸ್ ನಲ್ಲಿತ್ತು. ಎರಡೂ ಸಿನಿಮಾಗೂ ಪ್ರಶಸ್ತಿ ಬಂದಿದೆ. ಆದರೆ ರಿಷಬ್ ಅತ್ಯುತ್ತಮ  ನಟ ಪ್ರಶಸ್ತಿ ಪಡೆದುಕೊಂಡರು. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ತುಂಬಾ ಖುಷಿಯಾಗಿದ್ದ ರಿಷಬ್ ಗೆ ಅಭಿನಂದಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ಸಿಕ್ಕ ಬೆನ್ನಲ್ಲೇ ರಿಷಬ್ ಪತ್ರಿಕಾಗೋಷ್ಠಿ ನಡೆಸಿ ಈ ಪ್ರಶಸ್ತಿಯನ್ನು ದೈವಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಜೊತೆಗೆ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ ಅನೇಕರು ಕರೆ ಮಾಡಿದ್ದಾರೆ ಎಂದಿದ್ದಾರೆ. ಆ ಪೈಕಿ ರಾಕಿಂಗ್ ಸ್ಟಾರ್ ಯಶ್ ಮತ್ತು ತಮಿಳಿನ ಸ್ಟಾರ್ ನಟ ವಿಕ್ರಮ್ ಕೂಡಾ ಸೇರಿದ್ದಾರೆ.

ಯಶ್ ಫೋನ್ ಮಾಡಿ ತುಂಬಾ ಖುಷಿ ವ್ಯಕ್ತಪಡಿಸಿದ್ದಾಗಿ ರಿಷಬ್ ಹೇಳಿದ್ದರು. ಯಶ್ ಸಂಭ್ರಮ ಇಷ್ಟಕ್ಕೇ ನಿಲ್ಲಲಿಲ್ಲ. ಎಲ್ಲರಿಗಿಂತ ಮೊದಲು ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ಗೆ ಯಶ್ ಅಭಿನಂದನೆ ತಿಳಿಸಿದ್ದಾರೆ. ರಿಷಬ್ ಬಗ್ಗೆ ಹೇಳಿರುವ ಯಶ್ ಈ ಪ್ರಶಸ್ತಿಗೆ ನೀವು ಅರ್ಹರಾಗಿದ್ದಿರಿ ಎಂದು ಸಂಭ್ರಮಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಜಿಯೋ ಹಾಟ್‌ಸ್ಟಾರ್ ಸರ್ವರ್‌ ದಿಢೀರ್‌ ಡೌನ್‌: ಸರ್ಚ್‌ ಬಟನ್‌ ನಾಪತ್ತೆ, ಚಂದಾದಾರರ ಪರದಾಟ

ಮುಂದಿನ ಸುದ್ದಿ
Show comments