Daily Horoscope

Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಮೊದಲ ಸ್ಯಾಲರಿ ಕೇಳಿದ್ರೆ ಶಾಕ್ ಆಗ್ತೀರಿ

Yash
ಬೆಂಗಳೂರು: ರಾಕಿಂಗ್ ಸ್ಟಾರ್ ಎಂದು ಇಂದು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿರುವ ಯಶ್ ಮೊದಲು ಪಡೆದ ಸ್ಯಾಲರಿ ವಿವರ ಕೇಳಿದ್ರೆ ಶಾಕ್ ಆಗ್ತೀರಿ.

ನಟ ಯಶ್ ಯಾರ ಶಿಫಾರಸ್ಸು ಇಲ್ಲದೇ, ಹಿನ್ನಲೆಯಿಲ್ಲದೇ ಚಿತ್ರರಂಗಕ್ಕೆ ಸ್ವಂತ ಪರಿಶ್ರಮದಿಂದ ಬಂದವರು. ಅವರ ಮೊದಲ ಹೆಸರು ನವೀನ್ ಕುಮಾರ್. ಏಕಾ ಏಕಿ ಸ್ಟಾರ್ ಆದ ನಟರಲ್ಲ ಅವರು. ಕಿರುತೆರೆಗೆ ಎಂಟ್ರಿ ಕೊಡುವ ಮೊದಲೂ ಅವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದರು.

ಬೆನಕ ತಂಡದಲ್ಲಿ ಯಶ್ ನಟನೆಯ ಪಟ್ಟುಗಳನ್ನು ಕಲಿತರು. ಕಾಲೇಜಿನಲ್ಲಿದ್ದಾಗಲೇ ಡ್ಯಾನ್ಸ್ ಹುಚ್ಚಿತ್ತು. ರಂಗಭೂಮಿಯಲ್ಲಿ ನಟನೆಯ ಎಬಿಸಿಡಿ ಕಲಿತರು. ಅವರು ಮೊದಲು ಸಂಭಾವನೆ ಪಡೆದಿದ್ದು ಬೆನಕ ತಂಡದಲ್ಲಿ. ಆಗ ಅವರಿಗೆ ಸಿಕ್ಕಿದ್ದ ಸಂಭಾವನೆ ಕೇವಲ 50 ರೂ. ಕೇವಲ 300 ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದ ಯಶ್ ರಂಗಭೂಮಿ ಬಳಿಕ ಕಿರುತೆರೆಗೆ ಕಾಲಿಟ್ಟರು. 2007 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು.

ಇದಾದ ಬಳಿಕ ಒಂದಾದ ಮೇಲೊಂದು ಹಿಟ್ ಸಿನಿಮಾ ಕೊಟ್ಟ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದು ಕೆಜಿಎಫ್ ಮೂಲಕ. ಇದೀಗ ಟ್ಯಾಕ್ಸಿಕ್ ಸಿನಿಮಾ ಮೂಲಕ ತಮ್ಮ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆಯಲ್ಲಿದ್ದಾರೆ. ಇಂತಿಪ್ಪ ರಾಕಿಂಗ್ ಸ್ಟಾರ್ ಯಶ್ ಗೆ ಇಂದು 40 ನೇ ಜನ್ಮದಿನದ ಸಂಭ್ರಮ.


Share this Story:

Follow Webdunia kannada

ಮುಂದಿನ ಸುದ್ದಿ

ಟ್ಯಾಟೂ ಹಾಕಿಸಿಕೊಂಡ ದೀಪಿಕಾಗೆ ನಿಮ್ಮ ಗಂಡ ಅಷ್ಟೇ ನೋಡಬೇಕೆನ್ನುವುದಾ ನೆಟ್ಟಿಗರು, Video