ಉಡುಪಿ: ಕಾಂತಾರ 1 ಟ್ರೈಲರ್ ಬಿಡುಗಡೆಯಾದ ಮರುದಿನವೇ ನಟ ರಿಷಭ್ ಶೆಟ್ಟಿ ಅವರು ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿದ್ದಾರೆ.
ಪತ್ನಿ ಪ್ರಗತಿ ಶೆಟ್ಟಿ ಸಹಿತ ಕೊಲ್ಲೂರುಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ದಿನಗಣನೆ ಹಿನ್ನೆಲೆ ಇದೀಗ ರಿಷಭ್ ದೇವಿಯ ದರ್ಶನ ಪಡೆದಿದ್ದಾರೆ.
ಸೋಮವಾರ ನಟ ರಿಷಭ್ ಶೆಟ್ಟಿ ಅವರು ಅಭಿನಯಿಸಿ, ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ರಿಲೀಸ್ ಅನ್ನು ಮಾಡಲಾಯಿತು. ಕಾಂತಾರ 2 ಸಿನಿಮಾ ವಿಶ್ವದಾದ್ಯಂತ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿತ್ತು. ಇದೀಗ ಅದರ ಹಿಂದಿನ ಭಾಗ ಕಾಂತಾರ 1 ಹೊಸ ಸಂಚಲನವನ್ನು ಮೂಡಿಸಲು ಸಿದ್ಧವಾಗಿದೆ.