ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕಾಂತಾರ ಚಾಪ್ಟರ್ 1 ಗೆ ಬಹಿಷ್ಕಾರವಂತೆ: ಶೆಟ್ರು ಹೇಳಿದ್ದೇನು

Krishnaveni K
ಮಂಗಳವಾರ, 30 ಸೆಪ್ಟಂಬರ್ 2025 (14:36 IST)
ಹೈದರಾಬಾದ್: ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕಾಂತಾರ ಚಾಪ್ಟರ್ 1 ಸಿನಿಮಾಗೆ ಬಹಿಷ್ಕಾರವಂತೆ. ಈ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಜ್ಯೂ ಎನ್ ಟಿಆರ್ ಕೂಡಾ ಕಾರ್ಯಕ್ರಮದಲ್ಲಿದ್ದರು.

ಎಲ್ಲರ ಮುಂದೆ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದರು. ನನ್ನ ಭಾಷೆ ಅರ್ಥವಾಗದೇ ಇದ್ದರೆ ತಾರಕ್ ಅಣ್ಣ ಹೇಳ್ತಾರೆ ಎಂದಿದ್ದರು. ಆದರೆ ಇದನ್ನೇ ತೆಲುಗಿನಲ್ಲಿ ಕೆಲವರು ವಿವಾದವೆಂಬಂತೆ ಬಿಂಬಿಸಿದ್ದಾರೆ. ರಿಷಬ್ ಹೈದರಾಬಾದ್ ಗೆ ಬಂದು ತೆಲುಗಿನಲ್ಲಿ ಮಾತನಾಡಿದರು ಎಂಬ ಒಂದೇ ಕಾರಣ ಇಟ್ಟುಕೊಂಡು ಕಾಂತಾರ ಸಿನಿಮಾಗೆ ಬಹಿಷ್ಕಾರ ಹಾಕುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಧಮ್ಕಿ ಹಾಕಿದ್ದಾರೆ.

ಇದಕ್ಕೆ ಕನ್ನಡಿಗರು ಪ್ರತಿಕ್ರಿಯಿಸಿದ್ದು ಹಾಗಿದ್ದರೆ ಇಲ್ಲಿಗೆ ಬರುವ ಎಲ್ಲಾ ತೆಲುಗು ನಟರು ತೆಲುಗಿನಲ್ಲೇ ಮಾತನಾಡುತ್ತಾರೆ. ನಾವೂ ಹಾಗೇ ತೆಲುಗು ಸಿನಿಮಾಗಳಿಗೆ ಬಹಿಷ್ಕಾರ ಹಾಕಿದರೆ ಹೇಗಿರುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಇನ್ನು ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಟ ರಿಷಬ್ ಶೆಟ್ಟಿ ‘ನಾನು ಹೆಮ್ಮೆಯ ಕನ್ನಡಿಗ. ನನ್ನ ಭಾಷೆ ಕನ್ನಡ. ನಾನು ಯೋಚಿಸುವುದು ಕನ್ನಡದಲ್ಲಿ. ಹೀಗಾಗಿ ಕನ್ನಡದಲ್ಲೇ ಮಾತನಾಡಿದ್ದೇನೆ. ತೆಲುಗು ಭಾಷೆ ನನಗೆ ಅಷ್ಟೊಂದು ಬರಲ್ಲ. ಹೀಗಾಗಿ ಸುಮ್ಮನೇ ಗೊತ್ತಿಲ್ಲದ ಭಾಷೆ ಮಾತನಾಡಿ ಭಾಷೆಗೆ ಅಗೌರವವಾಗುವುದು ಬೇಡವೆಂದು ಕನ್ನಡದಲ್ಲೇ ಮಾತನಾಡಿದ್ದೇನೆ. ಎಲ್ಲಾ ಭಾಷೆ ಕಲಿಯಲು ನನಗೆ ಖುಷಿ ಇದೆ. ಈಗ ಬೇರೆ ಬೇರೆ ಭಾಷೆಗಳಲ್ಲಿ ಸಂದರ್ಶನ ಕೊಡುವಾಗ ಸ್ವಲ್ಪ ಸ್ವಲ್ಪ ಎಲ್ಲಾ ಭಾಷೆ ಕಲಿಯುತ್ತಿದ್ದೇನೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments