ಕಾಂತಾರ ಚಾಪ್ಟರ್ 1 ಸಕ್ಸಸ್ ಗಾಗಿ ರಕ್ಷಿತ್, ರಾಜ್ ಬಿ ಶೆಟ್ಟಿ ಫಾರ್ಮುಲಾ ಮೊರೆ ಹೋದ ರಿಷಬ್ ಶೆಟ್ಟಿ

Krishnaveni K
ಬುಧವಾರ, 17 ಸೆಪ್ಟಂಬರ್ 2025 (10:21 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಗೆಳೆಯರಾದ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಫಾರ್ಮುಲಾ ಮೊರೆ ಹೋಗಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ಅಕ್ಟೋಬರ್ 2 ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಆದರೆ ಇದುವರೆಗೆ ಚಿತ್ರದ ಪ್ರಮೋಷನ್ ಕೂಡಾ ಆರಂಭವಾಗಿಲ್ಲ. ಇದರ ನಡುವೆ ಸಕ್ಸಸ್ ಗಾಗಿ ರಿಷಬ್ ಮಾಡಿಕೊಂಡಿರುವ ಪ್ಲ್ಯಾನ್ ಬಯಲಾಗಿದೆ.

ಕಾಂತಾರ ಬಿಡುಗಡೆಗೆ ಮೂರು ದಿನ ಮೊದಲೇ ದೇಶದ ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲು ಹೊಂಬಾಳೆ ಫಿಲಂಸ್ ಪ್ಲ್ಯಾನ್ ಮಾಡಿಕೊಂಡಿದೆ. ಇದರಿಂದ ಸಿನಿಮಾ ಬಗ್ಗೆ ಶ್ರಮವಿಲ್ಲದೇ ಪ್ರಚಾರ ಸಿಕ್ಕಂತಾಗುತ್ತದೆ.

ರಕ್ಷಿತ್ ಶೆಟ್ಟಿ ಈ ಹಿಂದೆ ಚಾರ್ಲಿ ಸಿನಿಮಾ ಪ್ರಚಾರ ಮಾಡಿದ್ದೂ ಇದೇ ರೀತಿ. ರಾಜ್ ಬಿ ಶೆಟ್ಟಿ ಕೂಡಾ ಮೊನ್ನೆಯಷ್ಟೇ ಸು ಫ್ರಮ್ ಸೋ ಸಿನಿಮಾ ಪ್ರಚಾರ ಮಾಡಿದ್ದೂ ಇದೇ ರೀತಿ. ಸು ಫ್ರಮ್ ಸೋ ಸಿನಿಮಾ ಬಿಡುಗಡೆಗೆ ಮೊದಲು ರಾಜ್ ಬಿ ಶೆಟ್ಟಿ ಊರೂರು ತಿರುಗಿ ನಮ್ಮ ಸಿನಿಮಾ ನೋಡಿ ಎಂದು ಕೇಳಲಿಲ್ಲ.

ಆದರೆ ಪೇಯ್ಡ್ ಪ್ರೀಮಿಯರ್ ಶೋಗಳೇ ಜನರ ಬಾಯಿಂದ ಬಾಯಿಗೆ ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ಹರಡುವಂತೆ ಮಾಡಿತ್ತು. ಇದೀಗ ರಿಷಬ್ ಕೂಡಾ ಪ್ರಮೋಷನ್ ಗಾಗಿ ಓಡಾಟ ಶುರು ಮಾಡಿಲ್ಲ. ಅದರ ಬದಲು ಪ್ರೀಮಿಯರ್ ಶೋಗಳನ್ನು ಆಯೋಜಿಸುವ ಮೂಲಕ ಚಿತ್ರದ ಪ್ರಚಾರ ಪಡೆಯಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಎಂದು ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಶೋ ಆಯೋಜನೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಮುಂದಿನ ಸುದ್ದಿ
Show comments