Webdunia - Bharat's app for daily news and videos

Install App

ಕೈಮುಗಿದು ನಿಂತು ಬೇಡಿಕೊಳ್ಳುತ್ತಿರುವ ರೇಣುಕಾಸ್ವಾಮಿ: ದರ್ಶನ್ ಕೇಸ್ ನ ಮತ್ತಷ್ಟು ಭಯಾನಕ ವಿಚಾರಗಳು ಔಟ್

Krishnaveni K
ಗುರುವಾರ, 22 ಆಗಸ್ಟ್ 2024 (09:25 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಆಂಡ್ ಗ್ಯಾಂಗ್ ಕ್ರೌರ್ಯದ ಬಗ್ಗೆ ಪೊಲೀಸರಿಗೆ ಮತ್ತಷ್ಟು ಸಾಕ್ಷ್ಯಗಳು ದೊರಕಿವೆ.

ಆರೋಪಿಗಳಲ್ಲಿ ಒಬ್ಬರಾದ ಪ್ರದೂಷ್ ಮತ್ತು ಇನ್ನೊಬ್ಬಾತನ ಮೊಬೈಲ್ ದತ್ತಾಂಶಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಡಿ ಗ್ಯಾಂಗ್ ನ ಮತ್ತಷ್ಟು ಕ್ರೌರ್ಯದ ಅರಿವಾಗಿದೆ. ಪ್ರದೂಷ್ ಮೊಬೈಲ್ ನಲ್ಲಿ ರೇಣುಕಾಸ್ವಾಮಿಯ ಫೋಟೋ ಸಿಕ್ಕಿದ್ದು, ಇದರಲ್ಲಿ ರಕ್ತಸಿಕ್ತನಾಗಿರುವ ರೇಣುಕಾಸ್ವಾಮಿ ಕೈ ಮುಗಿದು ನಿಂತಿರುವ ದೃಶ್ಯವಿದೆ ಎನ್ನಲಾಗಿದೆ.

ಆರೋಪಿಗಳ ಮೊಬೈಲ್ ಗಳ ಡೇಟಾ ರಿಟ್ರೀವ್ ಮಾಡಲು ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಅದೆಲ್ಲದರ ವರದಿ ಈಗ ಬಂದಿದ್ದು, ದರ್ಶನ್ ವಿರುದ್ಧ ಪೊಲೀಸರಿಗೆ ಮತ್ತಷ್ಟು ಸಾಕ್ಷ್ಯಗಳು ದೊರಕಿವೆ. ಇದರಿಂದಾಗಿ ಎ2 ಆಗಿದ್ದ ದರ್ಶನ್ ಈಗ ಎ1 ಆಗಿ ಬಡ್ತಿ ಪಡೆಯುವುದು ಬಹುತೇಕ ಖಚಿತವಾಗಿದೆ.

ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್ ಶೀಟ್ ತಯಾರಿಸಿರುವ ಪೊಲೀಸರು ಸದ್ಯದಲ್ಲೇ ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಒಟ್ಟು 4,000 ಪುಟಗಳ ಚಾರ್ಜ್ ಶೀಟ್ ಇದೆ ಎನ್ನಲಾಗಿದೆ. ಅಂದರೆ ಈ ಪ್ರಕರಣದ ಆಳ ಎಷ್ಟು ಎಂಬುದು ಇದರಲ್ಲೇ ಗೊತ್ತಾಗುತ್ತಿದೆ. ಚಾರ್ಜ್ ಶೀಟ್ ಅನ್ವಯ ಆರೋಪಿಗಳ ಬೇಲ್ ನಿರ್ಧಾರವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಮುಂದಿನ ಸುದ್ದಿ
Show comments