Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟಿಯರ ನಡುವೆ ಹುಳಿ ಹಿಂಡಿದವರ್ಯಾರು..?

ಸ್ಯಾಂಡಲ್ ವುಡ್ ನಟಿಯರ ನಡುವೆ ಹುಳಿ ಹಿಂಡಿದವರ್ಯಾರು..?
ಬೆಂಗಳೂರು , ಮಂಗಳವಾರ, 25 ಜುಲೈ 2017 (18:18 IST)
ಯಾವುದೇ ಚಿತ್ರರಂಗವಿರಲಿ ಅಲ್ಲಿ ನಟ ನಟಿಯರ ನಡುವೆ ವೃತ್ತಿಪರ ವೈರುಧ್ಯಗಳು ಇದ್ದೇ ಇರುತ್ತವೆ. ಕನ್ನಡ ಚಿತ್ರರಂಗವೂ ಅದರಿಂದ ಹೊರತಾಗಿಲ್ಲ. ಕೆಲವೊಮ್ಮೆ ವೈಯಕ್ತಿಕ ವಿಚಾರಗಳು ಮನಸ್ತಾಪಕ್ಕೆ ಕಾರಣವಾಗಿಬಿಡುತ್ತವೆ.

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮತ್ತು ನಟಿ ಐಂದ್ರಿತಾ ರೇ ನಡುವೆ ಸಂಬಂಧ ಅಷ್ಟು ಸರಿ ಇಲ್ಲವಂತೆ. ಈ ಮಾತನ್ನ ಸ್ವತಃ ಐಂದ್ರಿತಾ ಟಾಕ್ ಶೋ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ನಿರೂಪಕ ಅಕುಲ್ ಬಾಲಾಜಿ, ನಟಿ ರಮ್ಯಾ ಜೊತೆ ನಿಮ್ಮ ಸಂಬಂಧ ಹೇಗಿದೆ ಎಂದು ಕೇಳಿದಾಗ, ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಆದರೆ ಉದ್ಯಮದಲ್ಲಿನ ಕೆಲ ಜನರ ಕೆಲವು ತಪ್ಪುಗ್ರಹಿಕೆಯು ಅಪನಂಬಿಕೆಗೆ ಕಾರಣವಾಗದೆ ಎಂದು ಹೇಳಿದ್ದಾರೆ.

ಆದರೆ, ಅನಗತ್ಯ ವಿವಾದ ಸೃಷ್ಟಿಸಲು ಇಷ್ಟವಿಲ್ಲದ ಐಂದ್ರಿತಾ ರೇ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಹಾಕಿಲ್ಲ. ರಮ್ಯಾ ಅವರನ್ನ ಭೇಟಿಯಾಗಿ ತುಂಬಾ ಸಮಯ ಕಳೆದಿದ್ದು, ಸಮಯ ಸಿಕ್ಕರೆ ಭೇಟಿ ಮಾಡಿ ಮಾತನಾಡುವುದಾಗಿ ಹೇಳಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವ್ಹಾವ್..! ಅಭಿಮಾನಿಗಳನ್ನು ನಿಬ್ಬೆರಗಾಗಿಸುತ್ತೆ ಕತ್ರಿನಾ ಪುಷ್-ಅಪ್ ವಿಡಿಯೋ...