Select Your Language

Notifications

webdunia
webdunia
webdunia
webdunia

ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್

ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್
Bangalore , ಶುಕ್ರವಾರ, 17 ಫೆಬ್ರವರಿ 2017 (12:23 IST)
ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಆಕ್ಷನ್ ಕಟ್‌ಗೆ ಮರಳುತ್ತಿದ್ದಾರೆ. ಉಪ್ಪಿ ನಿರ್ದೇಶನದ ಚಿತ್ರದ ಎಂದರೆ ನಿರೀಕ್ಷೆಗಳು ಬೆಟ್ಟದಷ್ಟಿರುತ್ತವೆ. ಅವರ ನಿರ್ದೇಶನದ ಚಿತ್ರವನ್ನು ಎದುರು ನೋಡುವ ಅಭಿಮಾನಿ ಬಳಗಕ್ಕೇನು ಕಮ್ಮಿ ಇಲ್ಲ. 
 
ಉಪ್ಪಿ 2 ಚಿತ್ರದ ಬಳಿಕ ಉಪೇಂದ್ರ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧರಗುತ್ತಿದ್ದಾರೆ. ಕಳೆದ 15 ದಿನಗಳಿಂದ ಚಿತ್ರಕಥೆ ರಚನೆಯಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ ಎನ್ನುತ್ತವೆ ಮೂಲಗಳು. ಸ್ಕ್ರಿಪ್ಟ್ ಕೆಲಸ ಮುಗಿಯುತ್ತಿದ್ದಂತೆ ಅಧಿಕೃತವಾಗಿ ಸುದ್ದಿ ಹೊರಬೀಳದೆ.
 
ಇತ್ತೀಚೆಗಷ್ಟೇ ಉಪ್ಪಿ ಮತ್ತೆ ಹುಟ್ಟಿ ಬಾ-ಇಂತಿ ಪ್ರೇಮಾ ಚಿತ್ರದ ಶೂಟಿಂಗ್ ಮುಗಿದಿದೆ. ತೆಲುಗಿನಲ್ಲಿ ಭರ್ಜರಿ ಹಿಟ್ ದಾಖಲಿಸಿದ್ದ ಸೋಗ್ಗಾಡೆ ಚಿನ್ನಿನಾಯನ ಚಿತ್ರದ ರೀಮೇಕ್ ಇದಾಗಿದೆ. ಇದು ಹೊರತುಪಡಿಸಿದರೆ ಮಂಜು ಮಾಂಡವ್ಯ ಮತ್ತು ಶಶಾಂಕ್ ಜತೆಗಿನ ಚಿತ್ರಗಳಲ್ಲಿ ಉಪ್ಪಿ ಅಭಿನಯಿಸಬೇಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೊಂದು ಹಾಲಿವುಡ್ ಚಿತ್ರಕ್ಕೆ ಸಹಿಹಾಕಿದ ದೀಪಿಕಾ