Select Your Language

Notifications

webdunia
webdunia
webdunia
webdunia

ಇನ್ನೊಂದು ಹಾಲಿವುಡ್ ಚಿತ್ರಕ್ಕೆ ಸಹಿಹಾಕಿದ ದೀಪಿಕಾ

ಇನ್ನೊಂದು ಹಾಲಿವುಡ್ ಚಿತ್ರಕ್ಕೆ ಸಹಿಹಾಕಿದ ದೀಪಿಕಾ
Mumbai , ಶುಕ್ರವಾರ, 17 ಫೆಬ್ರವರಿ 2017 (12:12 IST)
ಬಾಲಿವುಡ್‌ನಿಂದ ಹಾಲಿವುಡ್‌ಗೆ ನೆಗೆದ ಬೆಡಗಿಯರಲ್ಲಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಪ್ರಮುಖರು. ಕ್ವಾಂಟಿಕೋ ಟಿವಿ ಸರಣಿಯಲ್ಲಿ ಖ್ಯಾತಳಾಗಿರುವ ಪ್ರಿಯಾಂಕಾ ಶೀಘ್ರದಲ್ಲೇ ಬೇವಾಚ್ ಸಿನಿಮಾ ಮೂಲಕ ಹಾಲಿವುಡ್ ಬೆಳ್ಳಿಪರದೆ ಅಲಂಕರಿಸಲಿದ್ದಾಳೆ.
 
ಇನ್ನು ದೀಪಿಕಾ ಪಡುಕೋಣೆ ಅಭಿನಯಿಸಿದ ಟ್ರಿಫುಲ್ ಎಕ್ಸ್... ಚಿತ್ರ ಈಗಾಗಲೆ ಬಿಡುಗಡೆಯಾಗಿದೆ. ಇದೀಗೆ ದೀಪಿಕಾ ಕೈಗೆ ಮತ್ತೊಂದು ಹಾಲಿವುಡ್ ಚಿತ್ರ ಸಿಕ್ಕಿದೆ. ಬ್ಯಾಂಗ್ ಬ್ಯಾಂಗ್ ನಿರ್ದೇಶಕ ಸಿದ್ದಾರ್ಥ್ ತನ್ನ ಮುಂದಿನ ಚಿತ್ರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 
 
ಚೀನಾದ ಹುಡುಗ ಮತ್ತು ಭಾರತದ ಹುಡುಗಿ ನಡಿನ ಪ್ರೇಮಕಥೆಯನು ತೆರೆಗೆ ತರಲಿದ್ದಾರೆ. ಇದರಲ್ಲಿ ಹೀರೋ ಆಗಿ ಚೀನಾದ ಡೆಂಗ್ ಛಾವೋ ಅಭಿನಯಿಸುವ ಸಾಧ್ಯತೆಗಳಿವೆ. ನಾಯಕಿಗಾಗಿ ಪ್ರಿಯಾಂಕಾ, ದೀಪಿಕಾ ಹೆಸರುಗಳು ಕೇಳಿಬಂದಿದ್ದು ಕೊನೆಯದಾಗಿ ದೀಪಿಕಾ ಆಯ್ಕೆಯಾಗಿದ್ದಾರೆ. "ಇದು ಇಂಡಿಯನ್ ಚೈನೀಸ್ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಸಾಗುವ ಕಥೆ. ಉಳಿದ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ" ಎಂದಿದ್ದಾರೆ ಸಿದ್ಧಾರ್ಥ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಿ ಅಮಿತಾಬ್ ಬಚ್ಚನ್ 48 ವರ್ಷಗಳ ಪಯಣ