Select Your Language

Notifications

webdunia
webdunia
webdunia
webdunia

ಬಿಗ್ ಬಿ ಅಮಿತಾಬ್ ಬಚ್ಚನ್ 48 ವರ್ಷಗಳ ಪಯಣ

ಬಿಗ್ ಬಿ ಅಮಿತಾಬ್ ಬಚ್ಚನ್ 48 ವರ್ಷಗಳ ಪಯಣ
Mumbai , ಶುಕ್ರವಾರ, 17 ಫೆಬ್ರವರಿ 2017 (11:42 IST)
ಬಿಗ್ ಬಿ ಅಮಿತಾಬ್ ಬಚ್ಚನ್ ಬಾಲಿವುಡ್‍ ಲೋಕಕ್ಕೆ ಅಡಿಯಿಟ್ಟು ಇಂದಿಗೆ 48 ವರ್ಷಗಳು ತುಂಬುತ್ತಿವೆ. ಈ ಸಂದರ್ಭದಲ್ಲಿ ಅಮಿತಾಬ್ ತಾನು ಸಹಿ ಮಾಡಿದ ಮೊದಲ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಿದ್ದಾರೆ.
 
ಅಮಿತಾಬ್ ಸಹಿ ಹಾಕಿದ ಮೊದಲ ಚಿತ್ರ ಸಾಥ್ ಹಿಂದೂಸ್ತಾನಿ. ಅಂದಿನ ಈ ಚಿತ್ರದ ಪ್ರೀಮಿಯರ್ ಶೋ ಫೋಟೋಗಳನ್ನು ಬಿಗ್ ಬಿ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಸಿನಿಮಾ ಬಿಡುಗಡೆಯಾದಾಗ ಐಕೆ ಗುಜ್ರಾಲ್ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು ಎಂದು ನೆನಪಿಕೊಂಡಿದ್ದಾರೆ.
 
ಆ ಬಳಿಕ ಗುಜ್ರಾಲ್ ಹಂಗಾಮಿ ಪ್ರಧಾನ ಮಂತ್ರಿಯಾಗಿದ್ದರು ಎಂದು ಟ್ವೀಟಿಸಿ ಚಿತ್ರೀಕರಣ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುತ್ತಿರುವ ಸರ್ಕಾರ್ 3 ಚಿತ್ರದಲ್ಲಿ ಅಮಿತಾಬ್ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಪ್ತಮಿತ್ರನೊಂದಿಗೆ ಮದುವೆ ತುಂಬಾ ಖುಷಿ ಕೊಟ್ಟಿದೆ