Webdunia - Bharat's app for daily news and videos

Install App

ನಟಿ ರಕ್ಷಿತಾ ಮೇಲೆ ಕಿಡಿಕಾರಿದ ರವಿಚಂದ್ರನ್ ಅಭಿಮಾನಿಗಳು. ಕಾರಣವೇನು ಗೊತ್ತಾ?

Webdunia
ಮಂಗಳವಾರ, 23 ಅಕ್ಟೋಬರ್ 2018 (09:42 IST)
ಬೆಂಗಳೂರು : ನಟಿ ರಕ್ಷಿತಾ  ತಮ್ಮ ಪತಿ ಪ್ರೇಮ್ ವಿರುದ್ಧ ಕಮೆಂಟ್ ಮಾಡುತ್ತಿರುವವರಿಗೆ ಟಾಂಗ್ ಕೊಡುವುದರ ಮೂಲಕ ಇದೀಗ ರವಿಚಂದ್ರನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ನಿರ್ದೇಶಕ ಪ್ರೇಮ್ ಅವರ ‘ದಿ ವಿಲನ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೂ ಕೂಡ ಕೆಲವರು ಈ ಚಿತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಈ ಬಗ್ಗೆ ಸಿಟ್ಟಾದ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದು ,ಇದರಲ್ಲಿ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ಬಗ್ಗೆಯೂ ಉಲ್ಲೇಖಿಸಿದ್ದರು. ಇದು ರವಿಚಂದ್ರನ್ ಅಭಿಮಾನಿಗಳನ್ನು ಕೆರಳಿಸಿದೆ.


ರಕ್ಷಿತಾ ಈ ಪತ್ರದಲ್ಲಿ ರವಿಚಂದ್ರನ್ ಅವರಿಗೆ ತಂದೆಯ ಶ್ರೀಮಂತ ಹಿನ್ನೆಲೆ ಸಾಥ್ ನೀಡಿತ್ತು. ನಾದಬ್ರಹ್ಮ ಹಂಸಲೇಖಾ ಅವರಂಥಾ ಮಹನೀಯರು ಜೊತೆಗಿದ್ದರು. ಆ ಪ್ರೇಮಲೋಕ ಮತ್ತು ಇತ್ತೀಚೆಗೆ ತೆರೆ ಕಂಡಿದ್ದ ಟಗರು ಚಿತ್ರದಲ್ಲಿಯೂ ಕಥೆ ಇರಲಿಲ್ಲ. ಆದರೂ ಅವುಗಳನ್ನು ಜನ ನೋಡಿಲ್ವಾ? ಗೆಲ್ಲಿಸಿಲ್ವಾ ಎಂಬರ್ಥದಲ್ಲಿ ರಕ್ಷಿತಾ ಬರೆದುಕೊಂಡಿದ್ದರು.


ಇದರಿಂದ ಕೆಂಡಮಂಡಲಾದ ರವಿಚಂದ್ರನ್ ಅಭಿಮಾನಿಗಳು ಪ್ರೇಮಲೋಕ ಸಿನಿಮಾ ಅರ್ಥವಾಗದಿದ್ದರೆ ಇನ್ನೊಂದು ಸಲ ನೋಡಿ ಅರ್ಥ ಮಾಡಿಕೊಳ್ಳಿ. ತಂತ್ರಜ್ಞಾನ ಕುಂಟುತ್ತಿದ್ದ ಕಾಲದಲ್ಲಿಯೇ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ನಮ್ಮ ಪ್ರೇಮಲೋಕ. ಅಂಥಾ ಚಿತ್ರದಲ್ಲಿ ಕಥೆ ಇಲ್ಲ ಅಂತ ಹೇಳಬೇಡಿ ಎಂದು ರಕ್ಷಿತಾ ವಿರುದ್ಧ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಮುಂದಿನ ಸುದ್ದಿ
Show comments