Select Your Language

Notifications

webdunia
webdunia
webdunia
webdunia

ನಾನಿರೋದೇ ಹೀಗೆ ನೋಡಿ! ಖಾಸಗಿ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ನಾನಿರೋದೇ ಹೀಗೆ ನೋಡಿ! ಖಾಸಗಿ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಬೆಂಗಳೂರು , ಸೋಮವಾರ, 16 ಮೇ 2022 (08:30 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯ ಮದುವೆಯಲ್ಲಿ ಪಾಲ್ಗೊಂಡ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪಟ ಕೊಡವ ಸೀರೆಯಲ್ಲಿ ಮಿಂಚಿರುವ ರಶ್ಮಿಕಾ ತಮ್ಮ ಹಳೆಯ ಗೆಳತಿಯರೊಂದಿಗೆ ಫೋಟೋಗೆ ಪೋಸ್ ಕೊಟ್ಟು ಖುಷಿಪಟ್ಟಿದ್ದಾರೆ. ವಿಮಾನ ನಿಧಾನವಾದರೂ ಬೆಳಗಿನ ಜಾವವೇ ಕಷ್ಟಪಟ್ಟು ಮದುವೆಯಲ್ಲಿ ಪಾಲ್ಗೊಳ್ಳಲು ಬಂದೆ. ನನ್ನ ಗೆಳತಿ ಮದುವೆಯಲ್ಲಿ ಪಾಲ್ಗೊಂಡು ಹಳೆಯ ಗೆಳತಿಯರನ್ನೆಲ್ಲಾ ಭೇಟಿ ಮಾಡಿದೆ ಎಂದಿದ್ದಾರೆ ರಶ್ಮಿಕಾ.

ರಶ್ಮಿಕಾಗೆ ಜಂಬ ಜಾಸ್ತಿ ಎನ್ನುವವರಿದ್ದಾರೆ. ಆದರೆ ಈ ಫೋಟೋ ಪ್ರಕಟಿಸಿರುವ ರಶ್ಮಿಕಾ, ‘ಮೊದಲಿನಿಂದಲೂ ರಶ್ಮಿಕಾ ಎಂದರೆ ಇರುವುದು ಹೀಗೆ. ಈಗಲೂ ಹಾಗೆಯೇ ಇದ್ದೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ 777 ಟ್ರೈಲರ್ ಇಂದು ರಿಲೀಸ್