Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನವೇ ರಕ್ಷಿತ್ ಅವರನ್ನ ಕುಟುಂಬಕ್ಕೆ ಆಹ್ವಾನಿಸಿದ ರಶ್ಮಿಕಾ.. ಕೊಡಗಿನಲ್ಲಿ ನಿಶ್ಚಿತಾರ್ಥ

ಹುಟ್ಟುಹಬ್ಬದ ದಿನವೇ ರಕ್ಷಿತ್ ಅವರನ್ನ ಕುಟುಂಬಕ್ಕೆ ಆಹ್ವಾನಿಸಿದ ರಶ್ಮಿಕಾ.. ಕೊಡಗಿನಲ್ಲಿ ನಿಶ್ಚಿತಾರ್ಥ
ಬೆಂಗಳೂರು , ಮಂಗಳವಾರ, 6 ಜೂನ್ 2017 (12:36 IST)
ಕಿರಿಕ್ ಪಾರ್ಟಿ ಜೋಡಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜುಲೈ 3ರಂದು ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ನೆರವೇರಲಿದೆ. ಇವತ್ತು ರಕ್ಷಿತ್ ಶೆಟ್ಟಿ ಹುಟ್ಟಿನ ದಿನವಾಗಿದ್ದು, ಈ ಕುರಿತಂತೆ ಫೇಸ್ಬುಕ್ ಪೋಸ್ಟ್ ಮಾಡಿರುವ ರಶ್ಮಿಕಾ ಮಂದಣ್ಣ, ತಮ್ಮ ಚಿಕ್ಕ ಕುಟುಂಬಕ್ಕೆ ರಕ್ಷಿತ್ ಶೆಟ್ಟಿಗೆ ಸ್ವಾಗತ ಕೋರಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ಜುಲೈ 3ರಂದು ರಶ್ಮಿಕಾ ಮಂದಣ್ಣ ಜೊತೆ ಕೊಡಗಿನಲ್ಲಿ ಎಂಗೇಜ್ ಮೆಂಟ್ ನಡೆಯುತ್ತಿರುವುದನ್ನ ಖಚಿತಪಡಿಸಿದ್ದಾರೆ. ರಶ್ಮಿಕಾ ಕೈಹಿಡಿಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಗಮನ ಸೆಳೆದಿದ್ದ ರಕ್ಷಿತ್ ಮತ್ತು ರಶ್ಮಿಕಾ ಇದೀಗ ಸತಿ ಪತಿಗಳಾಗುತ್ತಿದ್ದಾರೆ. ಅಂಬರೀಷ್-ಸುಮಲತಾ, ವಿಷ್ಣುವರ್ಧನ್-ಭಾರತಿ, ಉಪೇಂದ್ರ-ಪ್ರಿಯಾಂಕಾ ಸಾಲಿನಲ್ಲಿ ಸ್ಯಾಂಡಲ್ ವುಡ್`ನ ಮತ್ತೊಂದು ತಾರಾಜೋಡಿ ಇದಾಗಲಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಸಂಭಾವನೆ ಕೇಳಿದರೆ ದಂಗಾಗುತ್ತೀರಿ!