Publish Date: Thu, 05 Mar 2026 (10:50 IST)
Updated Date: Thu, 05 Mar 2026 (10:53 IST)
ಹೈದರಾಬಾದ್: ಮದುವೆಯಾಗಿ ಈಗ ತೆಲುಗು ಸೊಸೆಯಾದರೂ ಕನ್ನಡ ನಾಡಿನ ಮೂಲವನ್ನು ರಶ್ಮಿಕಾ ಮಂದಣ್ಣ ಮರೆತಿಲ್ಲ. ಇದಕ್ಕೆ ರಿಸೆಪ್ಷನ್ ನ ಈ ವಿಚಾರವೇ ಸಾಕ್ಷಿ.
ಫೆಬ್ರವರಿ 26 ರಂದು ಉದಯಪುರದಲ್ಲಿ ಖಾಸಗಿಯಾಗಿ ಮದುವೆಯಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ನಿನ್ನೆ ಹೈದರಾಬಾದ್ ನಲ್ಲಿ ಗಣ್ಯರಿಗಾಗಿ ಅದ್ಧೂರಿಯಾಗಿ ಆರತಕ್ಷತೆ ಏರ್ಪಡಿಸಿದ್ದರು.
ಈ ಆರತಕ್ಷತೆಗೆ ಟಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಜೊತೆ ರಾಜಕೀಯ ಗಣ್ಯರೂ ಆಗಮಿಸಿದ್ದರು. ವಿಶೇಷವಾಗಿ ರಶ್ಮಿಕಾ ಈ ಆರತಕ್ಷತೆಯಲ್ಲಿ ಉಟ್ಟಿದ್ದ ಸೀರೆ ಎಲ್ಲರ ಗಮನ ಸೆಳೆದಿದೆ. ಕೆಂಪು ಬಣ್ಣದ ಪಕ್ಕಾ ಮೈಸೂರು ಸಿಲ್ಕ್ ಸೀರೆಯನ್ನೇ ರಶ್ಮಿಕಾ ಉಟ್ಟುಕೊಂಡಿದ್ದಾರೆ.
ಮೈಸೂರಿನ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆ ಉಟ್ಟುಕೊಳ್ಳುವ ಮೂಲಕ ತಮ್ಮ ಜೀವನದ ಮಹತ್ವದ ಕ್ಷಣದಲ್ಲೂ ತವರಿನ ನಂಟು ಬಿಟ್ಟಿಲ್ಲ. ಇನ್ನು, ಸ್ಯಾಂಡಲ್ ವುಡ್ ನ ತಮ್ಮ ಸ್ನೇಹಿತರಾದ ದೀಕ್ಷಿತ್ ಶೆಟ್ಟಿ, ಆಶಿಕಾ ರಂಗನಾಥ್, ಅನುಷಾ ರೈ ಸೇರಿದಂತೆ ಆಪ್ತರನ್ನು ಕರೆದಿದ್ದರು. ಅವರೆಲ್ಲರೂ ಭಾಗಿಯಾಗಿ ಶುಭ ಕೋರಿದ್ದಾರೆ.