ಈ ರಾಂಧವ ನೈಜ ಸಾಹಸ ನಿಪುಣ!

Webdunia
ಮಂಗಳವಾರ, 13 ಆಗಸ್ಟ್ 2019 (16:07 IST)
ಭುವನ್ ಪೊನ್ನಣ್ಣ ಬಿಗ್ಬಾಸ್ ಸ್ಪರ್ಧಿಯಾಗಿ ಬಂದ ನಂತರದಲ್ಲಿ ನಟಿಸಿರೋ ಮೊದಲ ಚಿತ್ರ ರಾಂಧವ. ಬಹುಶಃ ಸಂಖ್ಯೆಯೇ ಮುಖ್ಯವಾಗಿದ್ದರೆ ಭುವನ್ ಈ ಎರಡು ವರ್ಷಗಳಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿಯಾಗಿರುತ್ತಿತ್ತೇನೋ. ಆದರೆ ಪ್ರತಿಯೊಂದಕ್ಕೂ ಗಂಭೀರವಾಗಿ ತಯಾರಿ ನಡೆಸಿ ಸೆನ್ಸೇಷನ್ ಕ್ರಿಯೇಟ್ ಮಾಡುವಂತೆಯೇ ಹೀರೋ ಆಗಿ ಲಾಂಚ್ ಆಗಬೇಕೆಂಬುದು ಭುವನ್ರ ಆಕಾಂಕ್ಷೆಯಾಗಿತ್ತು. ಅದಕ್ಕೆ ತಕ್ಕುದಾಗಿಯೇ ರಾಂಧವ ಚಿತ್ರ ರೆಡಿಯಾಗಿದೆ.
ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ಈ ಚಿತ್ರಕ್ಕಾಗಿ ಭುವನ್ ಪೊನ್ನಣ್ಣ ತಯಾರಾದ ರೀತಿಯದ್ದೇ ರಂಗು ರಂಗಾದ ಕಥೆಗಳಿವೆ. ಇಲ್ಲಿ ಭುವನ್ ಮೂರು ಶೇಡುಗಳ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ತಿಂಗಳುಗಟ್ಟಲೆ ತಯಾರಾಗಿದ್ದಾರೆ. ಆ ಪಾತ್ರವೇ ಆಗಿ ಹೋದಂತೆ ಒಗ್ಗಿಕೊಂಡಿದ್ದಾರೆ. ಹಾಗಿದ್ದ ಮೇಲೆ ಅವರು ಇಲ್ಲಿನ ಸಾಹಸ ಸನ್ನಿವೇಶಗಳೂ ಕೂಡಾ ನೈಜವಾಗಿಯೇ ಮೂಡಿ ಬರಬೇಕೆಂದು ಆಶಿಸಿದ್ದರಲ್ಲಿ ಯಾವ ಅಚ್ಚರಿಯು ಇಲ್ಲ.
 
ಈ ಚಿತ್ರದಲ್ಲಿ ಫ್ಯಾಂಟಸಿ ಡ್ರಾಮಾಗಳ ಜೊತೆ ಜೊತೆಗೇ ಮೈ ನವಿರೇಳಿಸೋ ಅದ್ಭುತ ಸಾಹಸ ಸನ್ನಿವೇಶಗಳೂ ಇವೆ. ಇಡೀ ಚಿತ್ರದ ಪ್ರಧಾನ ಆಕರ್ಷಣೆಯೇ ಇಂಥಾ ಸಾಹಸ ಸನ್ನಿವೇಶಗಳು. ಆದರೆ ಅಂಥಾ ರಿಸ್ಕೀ ಸಾಹಸಗಳನ್ನು ಕೂಡಾ ನೈಜವಾಗಿಯೇ ಮಾಡಬೇಕೆಂಬುದು ಭುವನ್ ಇಂಗಿತವಾಗಿತ್ತು. ಆದರೆ ಆರಂಭದಲ್ಲಿ ಅನಾಹುತ ಸಂಭವಿಸಬಹುದೆಂದು ಹೆದರಿ ನಿರ್ದೇಶಕರು ಹಿಂದೇಟು ಹಾಕಿದ್ದರಂತೆ. ಆದರೆ ಭುವನ್ ಕಡೆಗೂ ಅದಕ್ಕೆ ಒಪ್ಪಿಸಿ ಸಾಹಸ ಸನ್ನಿವೇಶಗಳನ್ನು ಯಾವ ಗಿಮಿಕ್ಕೂ ಇಲ್ಲದೆ ನೈಜವಾಗಿ ನಿರ್ವಹಿಸಿದ್ದಾರಂತೆ. ಈ ಮೂಲಕ ಆಕ್ಷಷನ್ ಹೀರೋ ಆಗಿಯೂ ನೆಲೆ ಕಂಡುಕೊಳ್ಳುವ ಮಹದಾಸೆ ಭುವನ್ ಅವರದ್ದು. ಅದರ ಅಸಲೀ ಮಜಾ ಇದೇ ತಿಂಗಳ 23ರಂದು ಬಯಲಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ
Show comments