Select Your Language

Notifications

webdunia
webdunia
webdunia
webdunia

ನವ ತಂತ್ರಜ್ಞಾನಗಳಿಂದ ಮನ ಸೆಳೆಯಲಿರೋ ರಾಂಧವ!

ನವ ತಂತ್ರಜ್ಞಾನಗಳಿಂದ ಮನ ಸೆಳೆಯಲಿರೋ ರಾಂಧವ!
ಬೆಂಗಳೂರು , ಮಂಗಳವಾರ, 13 ಆಗಸ್ಟ್ 2019 (16:05 IST)
ಸದ್ಯದ ವಾತಾವರಣದಲ್ಲಿ ಸಿನಿಮಾವೊಂದು ಜನರನ್ನು ಸೆಳೆಯಬೇಕೆಂದರೆ ತಾಂತ್ರಿಕವಾಗಿಯೂ ಹೊಸತನ ಅಳವಡಿಸಿಕೊಳ್ಳಲೇ ಬೇಕೆಂಬಂಥಾ ವಾತಾವರಣವಿದೆ. ಅದರಲ್ಲಿಯೂ ಪರಭಾಷಾ ಚಿತ್ರಗಳಿಗೇ ಸೆಡ್ಡು ಹೊಡೆದು ಬೇರೆ ಭಾಷೆಗಳಲ್ಲಿಯೂ ಮಿರುಗಬೇಕೆಂದರೆ ತಾಂತ್ರಿವಾಗಿ ಹೊಸತನ ಬೇಕೇ ಬೇಕು. ಇಂಥಾ ಅಪ್ಡೇಟೆಡ್ ಮನಸ್ಥಿತಿಯೊಂದಿಗೇ ನಿರ್ಮಾಣಗೊಂಡಿರೋ ಅದ್ದೂರಿ ಚಿತ್ರ ರಾಂಧವ. ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ಬಿಡುಗಡೆಗೊಳ್ಳಲಿರೋ ಈ ಚಿತ್ರ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ.
ಸುನೀಲ್ ಆಚಾರ್ಯ ನಿರ್ದೇಶನ ಮಾಡಿರತೋ ಈ ಚಿತ್ರದಲ್ಲಿ ಭುವನ್ ಪೊನ್ನಣ್ಣ ಕಾಣಿಸಿಕೊಂಡಿರೋ ವಿವಿಧ ಗೆಟಪ್ಪುಗಳು ಈಗಾಗಲೇ ಜನಪ್ರಿಯಗೊಂಡಿವೆ. ಇದು ಪೌರಾಣಿಕ ಹಾಗೂ ಆಧುನಿಕ ಕಥಾಹಂದರ ಸಮಾಗಮಿಸಿರೋ ಚಿತ್ರವೆಂಬುದೂ ಸ್ಪಷ್ಟವಾಗಿವೆ. ಇದರಲ್ಲಿ ಶೇಖಡಾ ನಲವತ್ತರಷ್ಟು ಭಾಗ ಗ್ರಾಫಿಕ್ಸ್ ಇದೆಯಂತೆ. ಕನ್ನಡ ಚಿತ್ರಗಳ ಮಟ್ಟಿಗೆ ಇದೊಂದು ದಾಖಲೆಯೇ. ಅಂದಹಾಗೆ ಈ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಪರಭಾಷಾ ಚಿತ್ರರಂಗದಲ್ಲಿ ಗೆಲುವಿನ ಛಾಪು ಮೂಡಿಸಿರೋ ತಂಡವೊಂದು ನಿರ್ವಹಿಸಿದೆ.
 
ತೆಲುಗಿನ ಸೂಪರ್ ಹಿಟ್ ಚಿತ್ರ ಮಗಧೀರಕ್ಕೆ ಗ್ರಾಫಿಕ್ಸ್ ಟಚ್ ನೀಡಿದ್ದ ತಂಡ ರಾಂಧವನಿಗಾಗಿಯೂ ಶ್ರಮಿಸಿದೆ. ಆ ತಂಡದ ಕಡೆಯಿಂದ ಅರ್ಧ ಭಾಗದಷ್ಟು ಕೆಲಸ ಮಾಡಿಸಿರೋ ನಿರ್ದೇಶಕರು ಮಿಕ್ಕಿದ್ದನ್ನು ಹಾಲಿವುಡ್ ತಂತ್ರಜ್ಞರ ಕಡೆಯಿಂದ ಮಾಡಿಸಿದ್ದಾರಂತೆ. ಹಾಲಿವುಡ್ ಮಟ್ಟದಲ್ಲಿ ತರಬೇತಿ ಪಡೆದುಕೊಂಡಿರೋ ಶಿವು ರಾಂಧವನಿಗೂ ಕ್ಯಾಮೆರಾ ಕಣ್ಣಾಗಿದ್ದಾರೆ. ಈ ಚಿತ್ರ ತಾಂತ್ರಿಕವಾಗಿ ಅದೆಷ್ಟು ಬಲಿಷ್ಟವಾಗಿದೆ ಎಂಬುದಕ್ಕೆ ಇವಿಷ್ಟಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಇಲ್ಲಿನ ಬಹುತೇಕ ದೃಷ್ಯಗಳು ಬೇರೆಯದ್ದೇ ಫೀಲ್ ಕೊಡುವಂತಿವೆ. ಹಿನ್ನೆಲೆ ಸಂಗೀತವಂತೂ ಬೇರೆಯದ್ದೇ ರೀತಿಯಲ್ಲಿ ಈ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ಯುವಂತಿದೆಯಂತೆ. ಇದೆಲ್ಲದರ ನಿಗೂಢಗಳೂ ಇದೇ ಇಪ್ಪತ್ಮೂರನೇ ತಾರೀಕಿನಂದು ಜಾಹೀರಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವರ್ ಬಾಯ್ ಆಗಲೊಲ್ಲದ ರಗಡ್ ರಾಂಧವ!