Webdunia - Bharat's app for daily news and videos

Install App

ಸುಶಾಂತ್ ಸಿಂಗ್ ವಾಸವಿದ್ದ ಮನೆ ಖರೀದಿಸಿದ 'ರಣವಿಕ್ರಮ' ನಟಿ

Sampriya
ಶನಿವಾರ, 6 ಏಪ್ರಿಲ್ 2024 (14:39 IST)
Photo Courtesy X
ಮುಂಬೈ: ರಣವಿಕ್ರಮ ಸಿನಿಮಾದಲ್ಲಿ ನಟ ಪುನೀತ್ ರಾಜ್‌ಕುಮಾರ್‌ ಜತೆ ನಟಿಸಿದ್ದ ಬಹುಭಾಷಾ ನಟಿ ಅದಾ ಶರ್ಮಾ ಅವರು ಮುಂಬೈನಲ್ಲಿ ದುಬಾರಿ ಬೆಲೆ ಬಾಳುವ ಮನೆಯನ್ನು ಖರೀದಿ ಮಾಡಿದ್ದಾರೆ. ಆದರೆ ವಿಶೇಷ ಏನಪ್ಪಾ ಅಂದರೆ ಆ ಮನೆ ಈ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಖ್ಯಾತ ನಟ ಸುಶಾಂತ್ ಸಿಂಗ್ ಅವರಿದ್ದು.

ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಸುಶಾಂತ್ ಸಿಂಗ್ ಅವರು  2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್  ರೂಮ್​​ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆ ನಂತರ ಖಾಲಿ ಇದ್ದ ಮನೆಯನ್ನು ಯಾರು ಖರೀದಿಸಲು ಮುಂದಾಗಿರಲಿಲ್ಲ.

ಅಲ್ಲಿಂದ ಆ ಫ್ಲ್ಯಾಟ್ ಖಾಲಿಯೇ ಉಳಿದಿತ್ತು.  ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ್ದಾರೆ ನಟಿ ಅದಾ ಶರ್ಮಾ.

ಮುಂಬೈನ  ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿದ್ದು, ಸಮುದ್ರಕ್ಕೆ ಮುಖ ಮಾಡಿದ ಮನೆಯಾಗಿದೆ. ಒಟ್ಟು 2500 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಇಲ್ಲಿಯೇ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. 2020ರ ಜೂನ್ 14ರಂದು ಅವರು ನಿಧನ ಹೊಂದಿದರು. ಸಾವಿನ ನಂತರ ಯಾರೂ ಈ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ.

ಮನೆ ಖರೀದಿ ಬಗ್ಗೆ ಪ್ರತಿಕ್ರಿಯಿಸಿದ, ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ನಾನು ಭಾವಿಸಿದೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಹೀಗಾಗಿ, ನಾನು ಆ ಮನೆ ಖರೀದಿಸಿದೆ. ಅವರ ಬಗ್ಗೆ ಮಾಡಿದ ಕೆಲವು ಕಮೆಂಟ್​ಗಳನ್ನು ನೋಡಿದೆ. ನನ್ನನ್ನು ಟ್ರೋಲ್ ಮಾಡಿ. ಆದರೆ, ಜಗತ್ತಿನಲ್ಲಿ ಇಲ್ಲದ ಆ ವ್ಯಕ್ತಿ ಬಗ್ಗೆ ಮಾತನಾಡಬೇಡಿ ಎಂದು ವಿನಂತಿಸಿದ್ದರು.




<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments