Publish Date: Fri, 25 Dec 2020 (09:22 IST)
Updated Date: Fri, 25 Dec 2020 (09:24 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ಸಂಭ್ರಮದಲ್ಲಿದ್ದಾರೆ. ನಿಹಾರಿಕಾ ಮದುವೆ ಇದೇ ಡಿಸೆಂಬರ್ 28 ರಂದು ನೆರವೇರಲಿದೆ.
ಕೊರೋನಾ ಕಾರಣದಿಂದಾಗಿ ಕೇವಲ ಆಪ್ತೇಷ್ಟರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಿಹಾರಕಾ ಅಕ್ಷಯ್ ಎಂಬವರ ಕೈ ಹಿಡಿಯಲಿದ್ದು, ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿಯಲ್ಲಿ ಆರತಕ್ಷತೆ ನಡೆಸಲು ಕುಟುಂಬವರ್ಗ ತೀರ್ಮಾನಿಸಿದೆ.