ಬೆಂಗಳೂರು: ಕನ್ನಡದ ಸದಭಿರುಚಿ ಚಿತ್ರಗಳ ಸರದಾರ ರಮೇಶ್ ಅರವಿಂದ್ ಇದೀಗ 100 ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಪುಷ್ಪಕ ವಿಮಾನ ಅವರ 100 ನೇ ಸಿನಿಮಾ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ಹಿನ್ನಲೆಯಲ್ಲಿ ಅವರು ವಿದೇಶಗಳಿಗೆ ತೆರಳಿ ಅಲ್ಲಿನ ಕನ್ನಡಿಗರ ಜತೆ ಸಂವಾದ ನಡೆಸಲಿದ್ದಾರೆ.
ಬ್ರಿಟನ್ ಕನ್ನಡ ಸಂಘದ ಜತೆ ಈಗಾಗಲೇ ಅವರ ಅಪಾಯಿಂಟ್ ಮೆಂಟ್ ಫಿಕ್ಸ್ ಆಗಿದೆ. ಇದರ ಜತೆಗೆ ವಿಶ್ವದಾದ್ಯಂತ ಪ್ರಯಾಣ ಮಾಡಿ ಕನ್ನಡಿಗರ ಜತೆ ತಮ್ಮ 100 ಸಿನಿಮಾಗಳ ಬಗ್ಗೆ ಸಂವಾದ ನಡೆಸುವುದು ಅವರ ಉದ್ದೇಶವಂತೆ.
ಪುಷ್ಪಕ ವಿಮಾನ ಚಿತ್ರದಲ್ಲಿ ರಮೇಶ್ ಬುದ್ಧಿಮಾಂದ್ಯ ಅಪ್ಪನ ಪಾತ್ರ ವಹಿಸಿದ್ದಾರೆ. ಈ ಚಿತ್ರ ತಮ್ಮ ಚಿತ್ರ ಜೀವನದಲ್ಲೇ ಹಿಂದೆಂದೂ ಮಾಡಿರದ ವಿಶಿಷ್ಟ ಪಾತ್ರ ಎನ್ನುತ್ತಿದ್ದಾರೆ. ಇದರ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ರಮೇಶ್ ನಿರ್ದೇಶಿಸಿರುವ ಸುಂದರಾಂಗ ಜಾಣ ತೆರೆಗೆ ಬರಲು ಸಿದ್ಧವಾಗಿದೆ. ಹೀಗಿರುವಾಗ ರಮೇಶ್ ತಮ್ಮ ಚಿತ್ರ ಜೀವನದ ಆತ್ಮಾವಲೋಕನ ಮಾಡಲು ಅಭಿಮಾನಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ