Select Your Language

Notifications

webdunia
webdunia
webdunia
webdunia

ಸೆನ್ಸಾರ್ ಸಿಂಗಲ್ ಕಟ್ ಇಲ್ಲದೆ ಬರ್ತಿದೆ ’ಪುಷ್ಪಕ ವಿಮಾನ’

ಸೆನ್ಸಾರ್ ಸಿಂಗಲ್ ಕಟ್ ಇಲ್ಲದೆ ಬರ್ತಿದೆ ’ಪುಷ್ಪಕ ವಿಮಾನ’
Bangalore , ಶುಕ್ರವಾರ, 30 ಡಿಸೆಂಬರ್ 2016 (13:00 IST)
ಈ ರೀತಿ ಕೆಲವೇ ಕೆಲವು ಚಿತ್ರಗಳಿ ಮಾತ್ರ ಆಗುತ್ತದೆ. ಆ ರೀತಿಯ ವಿಭಾಗಕ್ಕೆ ಸೇರುವ ಚಿತ್ರ ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ. ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಒಂದೇ ಒಂದು ಕಟ್ ಇಲ್ಲದಂತೆ ಪ್ರಮಾಣ ಪತ್ರ ನೀಡಿದೆ. ಅದೂ ಯು ಸರ್ಟಿಫಿಕೇಟ್ ಎಂಬುದು ಮುಖ್ಯ.
 
ರಮೇಶ್ ಅರವಿಂದ್ ಚಿತ್ರಗಳೆಂದರೆ ಮನೆಮಂದಿಯಲ್ಲಾ ಕುಳಿತು ನೋಡುವಂತ ಸಿನಿಮಾಗಳು. ಅವರನ್ನು ಇಷ್ಟಪಡುವ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನ ಮಿಸ್ಟರ್ ಪರ್ಫೆಕ್ಟ್ ನಟ. ಎಸ್ ರವೀಂದ್ರ ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದು.
 
ಸೆನ್ಸಾರ್ ಮಂಡಳಿ ನಮ್ಮ ಚಿತ್ರವನ್ನು ನೋಡಿ ಮೆಚ್ಚಿದೆ. ಚಿತ್ರತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ವರ್ಷಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್.  ಜನವರಿ 6ಕ್ಕೆ ಚಿತ್ರಮಂದಿರಗಳಲ್ಲಿ ಪುಷ್ಪಕವಿಮಾನ ಹಾರಲಿದ್ದು, ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ಚಿತ್ರವನ್ನು ವಿತರಿಸುತ್ತಿದೆ. ಸುಮಾರು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಕಿರಿಕ್ ಪಾರ್ಟಿ’ ಹಾಡಿನ ವಿವಾದಕ್ಕೆ ಬ್ರೇಕ್ ಹಾಕಿದ ಹೈಕೋರ್ಟ್