Webdunia - Bharat's app for daily news and videos

Install App

ಎರಡನೇ ಮಗು ಮಾಡಿಕೊಳ್ಳಲು ರೆಡಿ ಎಂದ ರಾಮ್ ಚರಣ್ ಪತ್ನಿ ಉಪಾಸನಾ

Krishnaveni K
ಶುಕ್ರವಾರ, 23 ಫೆಬ್ರವರಿ 2024 (15:03 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಪತ್ನಿ ಉಪಾಸನಾ ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೈದರಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ನಾನು ನನ್ನ 34 ನೇ ವಯಸ್ಸಿಗೆ ಮೊದಲ ಮಗು ಮಾಡಿಕೊಳ್ಳಲು ನಿರ್ಧರಿಸಿದೆ. ಇದೀಗ ವೈದ್ಯರು ನನ್ನ ಆರೋಗ್ಯದ ಬಗ್ಗೆ ಖಚಿತತೆ ಕೊಟ್ಟರೆ ಎರಡನೇ ಮಗು ಮಾಡಿಕೊಳ್ಳಲು ತಯಾರಿರುವುದಾಗಿ ಉಪಾಸನಾ ಹೇಳಿಕೊಂಡಿದ್ದಾರೆ.

‘ನಾನು ನನ್ನ 34 ನೇ ವಯಸ್ಸಿಗೆ ಮಗು ಮಾಡಿಕೊಂಡೆ. ಇದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನ ಆರೋಗ್ಯ ನನ್ನ ಆಯ್ಕೆ. ಅದಕ್ಕಾಗಿ ಈ ನಿರ್ಧಾರ ಮಾಡಿದ್ದೆ. ಇದೀಗ ನನ್ನ ವೈದ್ಯರು ಸಮಸ್ಯೆಯಿಲ್ಲವೆಂದರೆ ಎರಡನೇ ಮಗು ಮಾಡಿಕೊಳ್ಳಲೂ ಸಿದ್ಧಳಿದ್ದೇನೆ. ಇದು ನನ್ನ ಜೀವನ. ಮಹಿಳೆಯರು ತಮ್ಮ ಜೀವನದ ಬಗ್ಗೆ ತಮ್ಮ ಆರೋಗ್ಯದ ಬಗ್ಗೆ ತಾವೇ ನಿರ್ಧಾರ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ರಾಮ್ ಚರಣ್-ಉಪಾಸನಾ ದಂಪತಿಗೆ ಕಳೆದ ವರ್ಷ ಹೆಣ್ಣು ಮಗುವಾಗಿತ್ತು. ಪುತ್ರಿಗೆ ರಾಮ್ ಚರಣ್ ದಂಪತಿ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದರು. ರಾಮ್ ಚರಣ್ ಮತ್ತು ಮಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿರುವ ಉಪಾಸನಾ ನನಗೆ ಅವರಿಬ್ಬರನ್ನು ನೋಡುವಾಗ ಹೊಟ್ಟೆಕಿಚ್ಚಾಗುತ್ತದೆ. ತಂದೆಯನ್ನು ನೋಡುವಾಗ ಅವಳ ಮುಖ ಅರಳುತ್ತದೆ. ಒಂದು ವಿಶೇಷ ನಗೆ, ಹೊಳಪು ಕಾಣುತ್ತದೆ. ಆದರೆ ನನ್ನನ್ನು ಯಾವತ್ತೂ ನೋಡುವವಳು ಎನ್ನುವ ಫೀಲ್ ಅಷ್ಟೇ’ ಎಂದು ತಮಾಷೆಯಾಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments