Webdunia - Bharat's app for daily news and videos

Install App

ಟಾಲಿವುಡ್ ಹೊಗಳಿದ ಮೋದಿ: ಸ್ಯಾಂಡಲ್ ವುಡ್ ಎಳೆದು ತಂದು ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

Webdunia
ಮಂಗಳವಾರ, 8 ಫೆಬ್ರವರಿ 2022 (10:38 IST)
ನವದೆಹಲಿ: ಹೈದರಾಬಾದ್ ಭೇಟಿ ವೇಳೆ ಪ್ರಧಾನಿ ಮೋದಿ ಟಾಲಿವುಡ್ ಸಿನಿಮಾಗಳನ್ನು ಹೊಗಳಿ ಮಾತನಾಡಿದ್ದರು. ಆದರೆ ಇದಕ್ಕೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಯಾಂಡಲ್  ವುಡ್ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ.

ತೆಲುಗು ಚಿತ್ರರಂಗ ಈಗ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಒಟಿಟಿ ಅಥವಾ ಥಿಯೇಟರ್ ಗಳಲ್ಲಿ ತೆಲುಗು ಸಿನಿಮಾಗಳು ಸದ್ದು ಮಾಡುತ್ತಿವೆ. ಭಾರತದ ಹೊರಗೂ ತೆಲುಗು ಸಿನಿಮಾಗಳನ್ನು ಜನ ವೀಕ್ಷಿಸುತ್ತಿದ್ದಾರೆ. ಟಾಲಿವುಡ್ ನಮ್ಮ ಹೆಮ್ಮೆ ಎಂದು ಪ್ರಧಾನಿ ಮೋದಿ ಹೊಗಳಿದ್ದರು.

ಇದಕ್ಕೀಗ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದು, ‘ತೆಲುಗು ಚಿತ್ರರಂಗದವರು ಮೋದಿ ಮಾತು ಕೇಳಿ ಡ್ಯಾನ್ಸ್ ಮಾಡಬೇಕಿಲ್ಲ. ಮೋದಿ ಕೇವಲ ಬಾಹುಬಲಿ, ಪುಷ್ಪವನ್ನಷ್ಟೇ ಮನಸ್ಸಲ್ಲಿಟ್ಟುಕೊಂಡು ಹೊಗಳಿದ್ದಾರೆ. ವರ್ಷದಲ್ಲಿ ತಯಾರಾಗುವ ಇತರ 150 ಸಿನಿಮಾಗಳ ಬಗ್ಗೆ ಅವರು ಮಾತನಾಡಿಲ್ಲ. ಒಂದು ವೇಳೆ ಅಲ್ಲು ಅರ್ಜುನ್, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ ವುಡ್ ನ್ನು ಹೊಗಳುತ್ತಿದ್ದರು’ ಎಂದಿದ್ದಾರೆ.

ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿ ಮಾಡುವ ರಾಮ್ ಗೋಪಾಲ್ ವರ್ಮಾ ಈಗ ಸ್ಯಾಂಡಲ್ ವುಡ್ ನಲ್ಲಿ ತೆಲುಗಿನಂತಹ ಗ್ಲೋಬಲ್ ಸ್ಟಾರ್ ಗಳಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಸಿನಿಮಾ ನಿರ್ಮಾಪಕನ ವಿರುದ್ಧ ಇದೆಂಥಾ ಆರೋಪ

ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿ ನಿನಗಾಗಿ ಸೀರಿಯಲ್‌ನ ನಟ ರಿತ್ವಿಕ್ ಮಠದ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಜೈಲು ಹಕ್ಕಿ ದರ್ಶನ್ ಗೆ ಇಂದು ಪತ್ನಿ ನೋಡೋ ಭಾಗ್ಯ

ಮುಂದಿನ ಸುದ್ದಿ
Show comments