Webdunia - Bharat's app for daily news and videos

Install App

ರಶ್ಮಿಕಾಗೆ ಅವಹೇಳನ ಮಾಡಿದವರ ವಿರುದ್ಧ ರಕ್ಷಿತ್ ಶೆಟ್ಟಿ ಗರಂ

Webdunia
ಮಂಗಳವಾರ, 8 ಜೂನ್ 2021 (09:11 IST)
ಬೆಂಗಳೂರು: ತಮ್ಮ ಬರ್ತ್ ಡೇ ದಿನವೇ ಚಾರ್ಲಿ 777 ಸಿನಿಮಾ ಟೀಸರ್ ಬಿಡುಗಡೆಯ ಖುಷಿ ಒಂದಾದರೆ, ರಕ್ಷಿತ್ ಶೆಟ್ಟಿಗೆ ಕೆಲವು ನೆಟ್ಟಿಗರು ನೋವು ಕೂಡಾ ನೀಡಿದ್ದಾರೆ.


ಚಾರ್ಲಿ 777 ಸಿನಿಮಾದಲ್ಲಿ ಒಂದೂ ಡೈಲಾಗ್ ಇಲ್ಲದೇ ಕೇವಲ ನಾಯಿಯನ್ನು ಬಳಸಿಕೊಂಡು ಟೀಸರ್ ಮಾಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವರು ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ವಿಚಾರವನ್ನು ಎಳೆದು ತಂದಿದ್ದು, ‘ಒಂದು ನಾಯಿಯನ್ನು ಫೇಮಸ್ ಮಾಡಿದವರಿಗೆ ಈ ನಾಯಿಯನ್ನು ಫೇಮಸ್ ಮಾಡುವುದು ಕಷ್ಟವಲ್ಲ ಬಿಡಿ’ ಎಂದು ಪೋಸ್ಟ್ ಹರಿಯಬಿಟ್ಟಿದ್ದರು. ನಿನ್ನೆ ಸಂಜೆ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿಗೂ ಹಲವರು ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ರವಾನಿಸಿದ್ದರು.

ಈ ಬಗ್ಗೆ ಲೈವ್ ನಲ್ಲಿಯೇ ರಕ್ಷಿತ್ ತಿರುಗೇಟು ಕೊಟ್ಟಿದ್ದಾರೆ. ‘ಸುಮಾರು ಜನ ಕೆಲವೊಂದು ಬೇಸರ ಹುಟ್ಟಿಸುವ ಕಾಮೆಂಟ್ ಮಾಡುತ್ತಿದ್ದಾರೆ. ಇದು ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ಹಳೆಯದನ್ನು ಅಲ್ಲಿಗೇ ಬಿಡಿ. ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಯಾವುದೇ ವ್ಯಕ್ತಿಯನ್ನು ಅಗೌರವಯುತವಾಗಿ ಕಾಣುವುದು ಬೇಡ. ಎಲ್ಲರಿಗೂ ಅವರದ್ದೇ ಆದ ಜೀವನವಿದೆ. ಅದನ್ನು ಗೌರವಿಸೋಣ. ನಮ್ಮ ಬಗ್ಗೆ ಅಸಹ್ಯ ಪಡುವ ಹಾಗೆ ಕಾಮೆಂಟ್ ಮಾಡುವುದು ಬೇಡ. ಎಲ್ಲರೂ ಮೊದಲು ಮಾನವರಾಗೋಣ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments