Select Your Language

Notifications

webdunia
webdunia
webdunia
webdunia

ತಮ್ಮದೇ ಎಂಗೇಜ್ ಮೆಂಟ್ ಗೆ ಮುನ್ನಾ ದಿನವಾದರೂ ರಕ್ಷಿತ್ ಶೆಟ್ಟಿ-ರಶ್ಮಿಕಾ ನಾಪತ್ತೆ!

ತಮ್ಮದೇ ಎಂಗೇಜ್ ಮೆಂಟ್ ಗೆ ಮುನ್ನಾ ದಿನವಾದರೂ ರಕ್ಷಿತ್ ಶೆಟ್ಟಿ-ರಶ್ಮಿಕಾ ನಾಪತ್ತೆ!
Bangalore , ಭಾನುವಾರ, 2 ಜುಲೈ 2017 (12:03 IST)
ಬೆಂಗಳೂರು: ತಮ್ಮದೇ ನಿಶ್ಚಿತಾರ್ಥ ಇಟ್ಟುಕೊಂಡು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಊರಲ್ಲೇ ಇಲ್ಲ. ಅವರ ಮನೆಯವರೆಲ್ಲಾ ಸಡಗರದಿಂದ ಓಡಾಡುತ್ತಿದ್ದಾರೆ. ಹಾಗಾದರೆ ಇವರ ಕತೆಯೇನು?

 
ಅಸಲಿಗೆ ಇವರಿಬ್ಬರೂ ದುಬೈಗೆ ಹೋಗಿದ್ದರು. ಸಿಮಾ ಅವಾರ್ಡ್ಸ್ ಸಮಾರಂಭದಲ್ಲಿ ಪಾಲ್ಗೊಳ್ಳಲು. ಈ ಪ್ರಶಸ್ತಿ ಸಮಾರಂಭದಲ್ಲಿ ಕಿರಿಕ್ ಪಾರ್ಟಿ 6 ಪ್ರಶಸ್ತಿ ಗಳಿಸಿಕೊಂಡಿದೆ. ಈ ಪ್ರಶಸ್ತಿ ಸ್ವೀಕರಿಸಲು ಇವರಿಬ್ಬರೂ ಅಲ್ಲಿಗೆ ತೆರಳಿದ್ದರು.

ನಾಳೆ ಇಬ್ಬರೂ ವಿರಾಜಪೇಟೆಯ ಸಭಾಂಗಣದಲ್ಲಿ ವಜ್ರದುಂಗುರ ಬದಲಾಯಿಸಿಕೊಳ್ಳಲಿದ್ದು, ತಮ್ಮಿಬ್ಬರ ಮದುವೆ ಅಂಕಿತ ಒತ್ತಲಿದ್ದಾರೆ. ಸುಮಾರು 500 ರಿಂದ 600 ಮಂದಿ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಎರಡೂ ಮನೆಯವರ ಆಪ್ತೇಷ್ಟರಿಗಷ್ಟೇ ಆಹ್ವಾನ.

ಕರಾವಳಿ ಮತ್ತು ಕೂರ್ಗ್ ಶೈಲಿಯ ಆಹಾರಗಳು ಅತಿಥಿಗಳಿಗಾಗಿ ಕಾದಿದೆ. ರಕ್ಷಿತ್ ಮತ್ತು ರಶ್ಮಿಕಾ ದುಬೈನಿಂದ ನೇರವಾಗಿ ನಿಶ್ಚಿತಾರ್ಥದ ಸ್ಥಳಕ್ಕೇ ಬರಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್ ಟಿ ವಿರೋಧಿಸಿ ತಮಿಳು ಚಿತ್ರಮಂದಿರಗಳು ಬಂದ್