Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿಯ ಎರಡನೇ ಹಾಡು ಬೆಳಗಾಗೆದ್ದು ಸೂಪರ್ ಹಿಟ್!

ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿಯ ಎರಡನೇ ಹಾಡು ಬೆಳಗಾಗೆದ್ದು ಸೂಪರ್  ಹಿಟ್!
ಬೆಂಗಳೂರು , ಶನಿವಾರ, 26 ನವೆಂಬರ್ 2016 (14:05 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ತಮ್ಮ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ. ಈ ಚಿತ್ರದ ತಿರುಬೋಕಿ ಜೀವನ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೂ ಟ್ಯೂಬ್ ನಲ್ಲಿ ಭಾರೀ ವೀಕ್ಷಕರನ್ನು ಗಳಿಸಿದೆ. ಇದೀಗ ಅದೇ ಚಿತ್ರದ ಎರಡನೇ ಹಾಡೂ ಬಿಡುಗಡೆಯಾಗಿದ್ದು ಭಾರೀ ಜನಪ್ರಿಯವಾಗಿದೆ.

ಬೆಳಗಾಗೆದ್ದು ಯಾರ ಮುಖವ ನೋಡಿದೆ ಎಂಬ ಕಾಮಿಡಿ ಪ್ಲಸ್ ಲವ್ ಹಾಡು ವೀಕ್ಷಕರನ್ನು ಸೆಳೆಯುತ್ತಿದೆ. ವಿಜಯ್ ಪ್ರಕಾಶ್ ಹಾಡಿದ ಹಾಡಿದು. ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಬಿ ಲೋಕನಾಥ್ ಸಂಗೀತವಿದೆ.

ತಿರುಬೋಕಿ ಜೀವನ ಹಾಡಿನಂತೇ ಇದು ಕೂಡಾ ವಿಶಲ್ ನಿಂದಲೇ ಪ್ರಾರಂಭವಾಗುವ ಕಾಮಿಡಿ ಮೆಲೊಡಿ ಹಾಡು. ಕಾಲೇಜ್ ಜೀವನದಲ್ಲಿ ಹುಡುಗಿಯ ಹಿಂದೆ ಬೀಳುವ ಕಿರಿಕ್ ಹುಡುಗನಾಗಿ ಈ ಹಾಡಿನಲ್ಲಿ ರಕ್ಷಿತ್ ತರ್ಲೆಗಳು ನಗು ಮೂಡಿಸುತ್ತವೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂ ಟ್ಯೂಬ್ ನಲ್ಲಿ ಇದನ್ನು 47,479 ಮಂದಿ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೀರ್ ಖಾನ್ ಸಿಗರೇಟ್ ಸೇದೋದು ಪುತ್ರ ಆಝಾದ್ ಗೆ ಇಷ್ಟವಿಲ್ಲವಂತೆ!