ಅವನೇ ಶ್ರೀಮನ್ನಾರಾಯಣ ಟ್ರೈಲರ್ ಲಾಂಚ್ ನಲ್ಲಿ ಕಣ್ಣೀರು ಹಾಕಿದ ರಕ್ಷಿತ್ ಶೆಟ್ಟಿ

Webdunia
ಶುಕ್ರವಾರ, 29 ನವೆಂಬರ್ 2019 (09:02 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೈಲರ್ ಲಾಂಚ್ ಆಗಿದ್ದು ಬಿಡುಗಡೆಯಾದ ಮೂವತ್ತೇ ನಿಮಿಷಕ್ಕೆ 50 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಆದರೆ ಈ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಕ್ಷಿತ್ ಕೊಂಚ ಭಾವುಕರಾದ ಘಟನೆಯೂ ನಡೆಯಿತು.


ರಕ್ಷಿತ್ ನಟಿಸಿರುವ ಸಿನಿಮಾ ಮೂರು ವರ್ಷಗಳ ನಂತರ ಇದೀಗ ತೆರೆಗೆ ಬರುತ್ತಿದೆ. ಬೆರಳೆಣಿಕೆಯ ಸಿನಿಮಾ ಮಾಡಿದ್ದರೂ ರಕ್ಷಿತ್ ಗೆ ಅವರದ್ದೇ ಆದ ಅಭಿಮಾನಿ ಬಳಗದವರಿದ್ದಾರೆ. ಅವರ ಪ್ರತಿಯೊಂದು ಸಿನಿಮಾವೂ ಸೂಪರ್ ಹಿಟ್. ಹೀಗಾಗಿ ರಕ್ಷಿತ್ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡು ಅಲ್ಲಿಂದ ಇಲ್ಲಿಯವರೆಗೆ ತಮ್ಮ ಜತೆಗಿದ್ದ ಸ್ನೇಹಿತರನ್ನೆಲ್ಲಾ ನೆನೆಯುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಅದೇನೇ ಇರಲಿ, ಈ ಸಿನಿಮಾ ಅವರ ಕನಸಿನ ಕೂಸು.

ಈ ಸಿನಿಮಾ ಟ್ರೈಲರ್ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂನಲ್ಲೂ ಲಾಂಚ್ ಆಗಿದ್ದು, ಭಾರೀ ಲೈಕ್ಸ್ ಪಡೆದಿದೆ. ಇನ್ನು, ಸಿನಿಮಾ ಟ್ರೈಲರ್ ನೋಡಿದಾಗ ರಕ್ಷಿತ್ ಶೆಟ್ಟಿ ಪೊಲೀಸ್ ಲುಕ್, ಡೈಲಾಗ್, ಸಾಹಸಗಳು, ಹಳೆಯ ಕಾಲದ ಸೆಟ್ ಎಲ್ಲವೂ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ ಎನ್ನುವಂತಿದೆ.

ಟ್ರೈಲರ್ ನೋಡಿ ಅಭಿಪ್ರಾಯ ವ್ಯಕ್ತಪಡಿಸಿರುವ ವೀಕ್ಷಕರು ಇದು ಹಾಲಿವುಡ್ ರೇಂಜ್ ಗಿದೆ ಎಂದಿದ್ದಾರೆ. ಅಂತೂ ಮೂರು ವರ್ಷ ಕಾದಿದ್ದಕ್ಕೂ ಭರ್ಜರಿ ಸಿನಿಮಾದೊಂದಿಗೆ ರಕ್ಷಿತ್ ತೆರೆ ಮೇಲೆ ಪಂಚ ಭಾಷೆಗಳಲ್ಲಿ ಮಿಂಚಲು ಬರುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments