Webdunia - Bharat's app for daily news and videos

Install App

ಅಯೋಧ್ಯೆಯ ರಾಮಮಂದಿರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Krishnaveni K
ಬುಧವಾರ, 6 ಮಾರ್ಚ್ 2024 (13:45 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಅಯೋಧ‍್ಯೆಗೆ ಭೇಟಿ ನೀಡಿದ್ದಾರೆ. ಅಯೋಧ‍್ಯೆಯಲ್ಲಿ ಶ್ರೀರಾಮನ ದರ್ಶನ ಮಾಡಿದ್ದಾರೆ.

ತಮ್ಮ ಸಂಗಡಿಗರೊಂದಿಗೆ ರಕ್ಷಿತ್ ಅಯೋಧ್ಯೆಗೆ ಭೇಟಿ ನೀಡಿದ್ದು, ಪಕ್ಕಾ ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ್ದಾರೆ. ಅವರು ಅಯೋಧ್ಯೆಯಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇಸರಿ ಶಾಲು, ತಿಲಕ ಹಾಕಿಕೊಂಡು ಅಯೋಧ್ಯೆಯಲ್ಲಿ ರಕ್ಷಿತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ತಮ್ಮ ಒಂದಷ್ಟು ಸಂಗಡಿಗರ ಜೊತೆ ನೆಲದ ಮೇಲೆ ಕುಳಿತು ಸಾಮಾನ್ಯರಂತೇ ಕಾಲ ಕಳೆದಿದ್ದಾರೆ. ರಕ್ಷಿತ್ ಎಂಥಾ ದೈವ ಭಕ್ತ ಎಂದು ಎಲ್ಲರಿಗೂ ಗೊತ್ತು. ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಊರಿನ ದೈವ ಕೋಲಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ದೈವ-ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ.

ಸದ್ಯಕ್ಕೆ ಸಪ್ತಸಾಗರದಾಚೆ ಎಲ್ಲೊ 2 ಮುಗಿಸಿಕೊಂಡು ರಕ್ಷಿತ್ ಸುದೀರ್ಘ ಬ್ರೇಕ್ ನಲ್ಲಿದ್ದಾರೆ. ಮುಂದೆ ಪುಣ್ಯಕೋಟಿ, ರಿಚರ್ಡ್ ಆಂಟನಿ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದರ ನಡುವೆ ಅವರ ಸ್ವಂತ ಬ್ಯಾನರ್ ನಿಂದ ಕೆಲವು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದರ ನಡುವೆ ಸಿಕ್ಕ ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಅಯೋಧ್ಯೆ ರಾಮಲಲ್ಲಾನನ್ನು ಭೇಟಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಸ್ಮಾರಕ ನೆಲಸಮ ಬೆನ್ನಲ್ಲೇ ಸಿಎಂ ಭೇಟಿಯಾದ ನಟ ಅನಿರುದ್ಧ್‌, ಯಾಕೆ ಗೊತ್ತಾ

ಮುಂಬೈನ ಪ್ರಸಿದ್ಧ ಲಾಲ್‌ಬೌಚಾ ರಾಜಾ ಪಾಂಡಲ್‌ಗೆ ನಟ ಸಿದ್ಧಾರ್ಥ್‌, ಜಾನ್ವಿ ಕಪೂರ್ ಭೇಟಿ

ಅನುಶ್ರೀ ಗಂಡ ನಿಜಕ್ಕೂ ಕೋಟ್ಯಾಧಿಪತಿನಾ, ಮದುವೆ ಬಳಿಕ ಬಯಲಾಯ್ತು ಸತ್ಯ

ಆಂಕರ್ ಅನುಶ್ರಿ ಮದುವೆ ಫೋಟೋಗಳು ಇಲ್ಲಿವೆ

ಅನುಶ್ರೀಗೆ ತಾಳಿ ಕಟ್ಟುವಾಗ ಕನ್ ಫ್ಯೂಸ್ ಆದ ರೋಷನ್: ಗಂಡನಿಗೆ ಗೈಡ್ ಮಾಡಿದ ಅನುಶ್ರೀ

ಮುಂದಿನ ಸುದ್ದಿ
Show comments