Webdunia - Bharat's app for daily news and videos

Install App

ಚಾರ್ಲಿ ಜೊತೆ ಲೈವ್ ಬಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

Sampriya
ಬುಧವಾರ, 15 ಮೇ 2024 (19:30 IST)
Photo Courtesy Instagram
ಬೆಂಗಳೂರು: 777 ಚಾರ್ಲಿ ಸಿನಿಮಾದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮನಸ್ಸನ್ನು ಕದ್ದ 'ಚಾರ್ಲಿ'  ಗುಡ್ ನ್ಯೂಸ್ ಕೊಟ್ಟಿರುವ ಬಗ್ಗೆ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.

ದಿಢೀರನೆ ಲೈವ್‌ಗೆ ಬಂದ ರಕ್ಷಿತ್ ಶೆಟ್ಟಿ ಅವರು, ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅದಲ್ಲದೆ ಚಾರ್ಲಿ ಹಾಗೂ ಆಕೆಯ ಮರಿಗಳನ್ನು ನೋಡುವ ಸಲುವಾಗಿ ಮೈಸೂರಿಗೆ ಬಂದಿದ್ದೇನೆ ಎಂದಿದ್ದಾರೆ.

ಲೈವ್‌ನಲ್ಲಿ ರಕ್ಷಿತ್ ಶೆಟ್ಟಿ ಮಾತನಾಡಿ, ಇದೊಂದು ಸರ್ಪ್ರೈಸ್ ಲೈವ್, ಕಾರಣ ಏನೆಂದರೆ 777 ಚಾರ್ಲಿ ರಿಲೀಶ್ ಆಗಿ 2 ವರ್ಷ ಆಗ್ತಾ ಬಂತು. ನಮಗೆ ಸಿನಿಮಾ ಬಿಡುಗಡೆ ಆದ ದಿನದಿಂದಲೂ ಚಾರ್ಲಿ ತಾಯಿಯಾಗಬೇಕೆಂಬುದಿತ್ತು. ಚಾರ್ಲಿಗೆ ಮರಿಗಳಾದರೆ ಈ ಸಿನಿಮಾ ಕಂಪ್ಲೀಟ್ ಆದ ಹಾಗೇ ಎಂದು ಹೇಳುತ್ತಿದ್ದೇವು. ಇದೀಗ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಆಕೆಯನ್ನು ಹಾಗೂ ಮರಿಗಳನ್ನು ನೋಡುವ ಸಲುವಾಗಿ ಇಂದು ಮೈಸೂರಿಗೆ ಬಂದಿದ್ದೇನೆ ಎಂದರು.

ಈಗಾ ಚಾರ್ಲಿ 6 ಮಕ್ಕಳ ತಾಯಿ. 5 ಹೆಣ್ಣು, 1 ಗಂಡು ನಾಯಿ ಮರಿಗೆ ಚಾರ್ಲಿ ಜನ್ಮ ನೀಡಿದ್ದಾಳೆ. ಈ ಮೂಲಕ 777 ಚಾರ್ಲಿ ಸಂಪೂರ್ಣವಾಗಿದೆ ಎಂದರು.

ಕೆಲಹೊತ್ತು ಚಾರ್ಲಿ ಜತೆ ಸಮಯ ಕಳೆದ ರಕ್ಷಿತ್ ಅವರು ಅದರ ಫೋಟೋ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೆಟಿಜನ್‌ಗಳು ಚಾರ್ಲಿ ಪತಿ ಎಲ್ಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ ಮತ್ತು ಇನ್ನೊಬ್ಬರು ಆ ನಾಯಿಮರಿಗಳಿಗೆ ತಮ್ಮ ತಾಯಿ ನಟಿ ಎಂದು ತಿಳಿದಿಲ್ಲ ಎಂದು ಕೇಳಿದರು


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

ಮುಂದಿನ ಸುದ್ದಿ
Show comments