Select Your Language

Notifications

webdunia
webdunia
webdunia
webdunia

ಮಾರ್ಚ್ ಮಧ್ಯಂತರದಲ್ಲಿ ಬಾಹುಬಲಿ 2 ಟ್ರೇಲರ್

ಮಾರ್ಚ್ ಮಧ್ಯಂತರದಲ್ಲಿ ಬಾಹುಬಲಿ 2 ಟ್ರೇಲರ್
Hyderabad , ಸೋಮವಾರ, 27 ಫೆಬ್ರವರಿ 2017 (10:56 IST)
ಈಗಾಗಲೆ ಬಾಹುಬಲಿ 2 ಚಿತ್ರದ ಸ್ಟಿಲ್ಸ್ ಬಿಡುಗಡೆಯಾಗಿವೆ. ಮಹಾಶಿವರಾತ್ರಿ ದಿನ ಮೋಷನ್ ಪೋಸ್ಟರನ್ನೂ ಬಿಡುಗಡೆ ಮಾಡಿದ್ದರು ಎಸ್ ಎಸ್ ರಾಜಮೌಳಿ. ಈಗ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ ಮಧ್ಯಂತರದ ವೇಳೆಗೆ ಬಾಹುಬಲಿ 2 ಚಿತ್ರದ ಟ್ರೇಲರ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ ರಾಜಮೌಳಿ.
 
ಈಗಾಗಲೆ ಚಿತ್ರದ ಪ್ರಚಾರ ಕೆಲಸ ಭರದಿಂದ ಸಾಗುತ್ತಿದೆ. ದೇಶದಾದ್ಯಂತ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದ್ದು ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಚಿತ್ರದಲ್ಲಿ ಏನೆಲ್ಲಾ ತಂತ್ರಗಳು ಬಳಕೆ ಮಾಡಿಕೊಂಡಿದ್ದಾರೆ ಎಂಬ ಕುತೂಹಲ ಇದ್ದೇ ಇದೆ.
 
ಸದ್ಯಕ್ಕೆ ನಿರ್ಮಾಣ ನಂತರದ ಕೆಲಸಗಳು, ಡಿಜಿಟಲ್ ಇಮೇಜಿಂಗ್ ಕಾರ್ಯವೂ ಸಾಗುತ್ತಿದೆ. ಅದ್ದೂರಿಯಾಗಿ ಟ್ರೇಲರ್ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ತಮನ್ನಾ ಮುಂತಾದವರು ಚಿತ್ರದ ತಾರಾಬಳಗದಲ್ಲಿರುವುದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೇಡು-ಪ್ರತೀಕಾರದ ಸುತ್ತ ಸಾಗುವ ’ಎಳೆನೀರು’