Select Your Language

Notifications

webdunia
webdunia
webdunia
webdunia

ಟಾಲಿವುಡ್`ನಲ್ಲಿ ರಾಜಕುಮಾರನಿಗೆ ಫುಲ್ ಡಿಮ್ಯಾಂಡ್

ಟಾಲಿವುಡ್`ನಲ್ಲಿ ರಾಜಕುಮಾರನಿಗೆ ಫುಲ್ ಡಿಮ್ಯಾಂಡ್
ಹೈದರಾಬಾದ್ , ಮಂಗಳವಾರ, 20 ಜೂನ್ 2017 (17:51 IST)
ಶತದಿನದತ್ತ ಮುನ್ನುಗ್ಗುತ್ತಿರುವ ಕನ್ನಡದ ರಾಜಕುಮಾರ ಚಿತ್ರ ಕನ್ನಡಿಗರ ಮುನಮುಟ್ಟಿದ ಬಳಿಕ ನೆರೆಯ ರಾಜ್ಯಗಳಲ್ಲಿ ಇಂಪ್ಯಾಕ್ಟ್ ಮಾಡಿದೆ. ರಾಜಕುಮಾರನ ರೀಮೇಕ್ ರೈಟ್ಸ್`ಗೆ ಭಾರೀ ಬೇಡಿಕೆ ಬಂದಿದ್ದು, ರಾಜಕುಮಾರ ನಿರ್ಮಾಪಕರೇ ತೆಲುಗಿನಲ್ಲೂ ಈ ಚಿತ್ರ ನಿರ್ಮಾಣ ಮಾಡಲಿದ್ದು, ಸಂತೋಷ್ ಆನಂದ್ ರಾಮ್ ಅವರೇ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

87 ದಿನಗಳಲ್ಲಿ 7,577 ಕಂಡಿರುವ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ನಿರ್ಮಾ
ಪಕ ಕಾರ್ತಿಕ್ ಗೌಡ ಹೈದರಾಬಾದ್`ಗೆ ಭೇಟಿ ನೀಡಿ ಬಂದಿದ್ದಾರೆ. ಆದರೆ, ತೆಲುಗಿನಲ್ಲಿ ಚಿತ್ರ ನಿರ್ಮಾಣದ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ..

ಈ ಮಧ್ಯೆ, ಇಬ್ಬರೂ ಹೈದರಾಬಾದ್`ನಲ್ಲಿ ಬಾಹುಬಲಿ ನಿರ್ದೇಸಕ ರಾಜಮೌಳಿಯವರನ್ನ ಭೇಟಿ ಮಾಡಿದ್ದಾರೆ. ರಾಜಮೌಳಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ರಾಜಮೌಳಿ ಮತ್ತು ಅವರ ಪತ್ನಿ ಇಬ್ಬರೂ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡನ್ನ ಮೆಚ್ಚಿಕೊಂಡಿದ್ದು, ತಮ್ಮ ಮುಂದೆಯೇ ಹಾಡು ಕೇಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಚಿತ್ರದಲ್ಲೇ ಸೆಕ್ಸ್ ಸೀನ್ ಮೂಲಕ ಬಿಸಿ ಏರಿಸಿದ ನಟಿ