ಪ್ರೇಕ್ಷಕರನ್ನು ರಂಜಿಸಲಿದೆ ರಾಗಿಣಿ ಸ್ನೇಕ್ ಡ್ಯಾನ್ಸ್

ಸೋಮವಾರ, 2 ಜನವರಿ 2017 (11:29 IST)
ನಟಿ ರಾಗಿಣಿ ದ್ವಿವೇದಿ ನಾಗಿಣಿ ಆಗೋಕೆ ಹೊರಟಿದ್ದಾರೆ. ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿರುವ ’ಉಪ್ಪು ಹುಳಿ ಖಾರ’ ಚಿತ್ರದಲ್ಲಿ ರಾಗಿಣಿ ಸ್ನೇಕ್ ಡ್ಯಾನ್ಸ್ ಮಾಡಲಿದ್ದಾರಂತೆ. ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ.
 
ಇದುವರೆಗೂ ನಮ್ಮಿಬ್ಬರ ಕಾಂಬಿನೇಷನಲ್ಲಿ ಬಂದಿರುವ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಹಾಡಿಗಾಗಿ ರಾಗಿಣಿ ಅವರನ್ನು ಸಂಪರ್ಕಿಸಿದೆ. ಹಾವುಗಳು ಎಂದರೆ ನನಗೆ ಭಯ ಅಂದ್ರು. ಕಡೆಗೆ ಆ ಹಾಡಿನ ಮಹತ್ವ ಹೇಳಿದ ಮೇಲೆ ಒಪ್ಪಿಕೊಂಡಿದ್ದಾರೆ.
 
ಚಿತ್ರದಲ್ಲಿ ಅವರು ನಾಗಿಣಿಯಾಗಿ ಕಾಣಿಸಲಿದ್ದಾರೆ. ಒಂದು ದಿನ ನಾಗಿಣಿ ಡ್ಯಾನ್ಸ್‌ ಪ್ರಾಕ್ಟೀಸ್ ಮಾಡಿದರು. ಆಮೇಲೆ ಮೂರು ದಿನಗಳ ಕಾಲ ಹಾಡನ್ನು ಚಿತ್ರೀಕರಿಸಿಕೊಂಡಿದ್ದೇವೆ. ಈ ಹಾಡು ಚಿತ್ರದಲ್ಲಿ ಹೈಲೈಟ್ ಆಗಿರಲಿದೆ ಎಂದಿದ್ದಾರೆ ಇಮ್ರಾನ್ ಸರ್ದಾರಿಯಾ. ಅಭಿಮಾನಿಗಳು ಈ ಡ್ಯಾನ್ಸ್‌ಗೆ ಹಾತೊರೆಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ’ಸೈರಾಟ್’ ರೀಮೇಕ್ ಚಿತ್ರಕ್ಕೆ ಕನ್ನಡ ಟೈಟಲ್ ಏನ್ ಗೊತ್ತಾ?