Select Your Language

Notifications

webdunia
webdunia
webdunia
webdunia

ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ನನಗೆ ಸಾಥ್ ಕೊಡುವವರು ಇವರೇ ಎಂದ ರಾಧಿಕಾ ಪಂಡಿತ್

ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ನನಗೆ ಸಾಥ್ ಕೊಡುವವರು ಇವರೇ ಎಂದ ರಾಧಿಕಾ ಪಂಡಿತ್
ಬೆಂಗಳೂರು , ಶನಿವಾರ, 18 ಏಪ್ರಿಲ್ 2020 (09:40 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಈಗ ಸಿನಿ ರಂಗದಿಂದ ದೂರವಾಗಿ ಇಬ್ಬರು ಮಕ್ಕಳ ಮುದ್ದಿನ ಅಮ್ಮನಾಗಿ ಕಾಲ ಕಳೆಯುತ್ತಿದ್ದಾರೆ.


ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದು ಎಂದರೆ ಸುಲಭದ ಕೆಲಸವಲ್ಲ. ಆದರೆ ತನಗೆ ಈ ನಿಟ್ಟಿನಲ್ಲಿ ಬೆನ್ನುಲುಬಾಗಿ ನಿಲ್ಲುವವರು ನನ್ನ ಅಪ್ಪ-ಅಮ್ಮ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

ಐರಾ ಮತ್ತು ಜ್ಯೂನಿಯರ್ ನ್ನು ನಿಭಾಯಿಸುವುದು ಸುಲಭವಲ್ಲ. ನಾನು ಹೇಗೆ ಇಬ್ಬರನ್ನೂ ನೋಡಿಕೊಳ್ಳುತ್ತೇನೆ ಎಂದು ನಿಮಗೆ ಅಚ್ಚರಿಯಾಗಬಹುದು. ಇದಕ್ಕೆ ನನಗೆ ಬೆನ್ನುಲುಬಾಗಿರುವವರು ನನ್ನ ಅಪ್ಪ-ಅಮ್ಮ. ಇವರಿಂದಾಗಿಯೇ ನನಗೆ ಸ್ವಲ್ಪ ರಿಲ್ಯಾಕ್ಸ್ ಆಗಲು ಸಮಯ ಸಿಗುತ್ತಿದೆ. ನನಗೆ ಇವರು ಮಮ್ಮಿ-ಪಪ್ಪ. ಐರಾಗೆ ಮಿಮಿ, ಅಜ್ಜು. ನಾನು ಚಿಕ್ಕವಳಿದ್ದಾಗ ಅಮ್ಮನನ್ನು ಮಮ್ಮಿ ಎನ್ನುತ್ತಿದ್ದ ಕಾರಣಕ್ಕೆ ಅವಳು ನನ್ನ ಅಮ್ಮನನ್ನು ಮಿಮಿ ಎನ್ನುತ್ತಿದ್ದಾಳೆ. ಇವರಿಬ್ಬರನ್ನೂ ನನ್ನಿಬ್ಬರೂ ಮಕ್ಕಳೂ ತುಂಬಾ ಹಚ್ಚಿಕೊಂಡಿದ್ದಾರೆ. ಅವರನ್ನು ಒಂದು ದಿನವೂ ಮಿಸ್ ಮಾಡಿಕೊಳ್ಳಲು ಇಷ್ಟಪಡಲ್ಲ ಎಂದು ರಾಧಿಕಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವೀಕೆಂಡ್ ನಲ್ಲಿ ಮತ್ತೆ ರೆಬಲ್ ಸ್ಟಾರ್ ಅಂಬಿ, ಕಿಚ್ಚ ಸುದೀಪ್ ಕತೆ ಕೇಳಬಹುದು