ದಮ್ ಎಳೆಯೋಕೆ ಶುರು ಮಾಡ್ಕೊಂಡ್ರಾ ರಚಿತಾ ರಾಮ್?! ಫೋಟೋ ವೈರಲ್

ಗುರುವಾರ, 13 ಫೆಬ್ರವರಿ 2020 (16:01 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಮೊನ್ನೆಯಷ್ಟೇ ರಕ್ಷಿತಾ ಪ್ರೇಮ್ ಜತೆಗೆ ಏಕ್ ಲವ್ ಯಾ ಮೋಷನ್ ಪೋಸ್ಟರ್ ನಲ್ಲಿ ಡ್ರಿಂಕ್ಸ್ ಬಾಟಲಿ ಹಿಡಿದು ಪೋಸ್ ಕೊಟ್ಟಿದ್ದ ಫೋಟೋ ಮೂಲಕ ಸುದ್ದಿಯಾಗಿದ್ದರು.


ಆದರೆ ಇದೀಗ ಅದೇ ಏಕ್ ಲವ್ ಯಾ ಸೆಟ್ ನಲ್ಲಿ ಸಿಗರೇಟು ಹಿಡಿದು ದಮ್ ಎಳೆಯೋ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ರಚಿತಾ ದಮ್ ಎಳೆಯೋದಿಕ್ಕೆ ಶುರು ಹಚ್ಕೊಂಡ್ರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಆದರೆ ರಚಿತಾ ಈ ಸಿನಿಮಾದ ಹಾಡೊಂದರ ದೃಶ‍್ಯಕ್ಕಾಗಿ ಈ ರೀತಿಯ ಪೋಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ರಚಿತಾರ ಈ ಪೋಸ್ ನೋಡಿದ ಅಭಿಮಾನಿಗಳು ಇದೇನು ಮೇಡಂ ಈ ಅಭ್ಯಾಸ ಯಾವಾಗಿಂದ ಶುರು ಮಾಡ್ಕೊಂಡ್ರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಗೀತ ನಿರ್ದೇಶಕೆ ಎಆರ್ ರೆಹಮಾನ್ ಗೆ ಜಿಎಸ್ಟಿ ಕೌನ್ಸಿಲ್ ನೋಟಿಸ್