Select Your Language

Notifications

webdunia
webdunia
webdunia
webdunia

ಏ ದಿಲ್ ಹೈ ಮುಷ್ಕಿಲ್‌: ರಣಬೀರ್, ಐಶ್ವರ್ಯ ಹಾಟ್ ಸೀನ್‌ಗಳಿಗೆ ಸೆನ್ಸಾರ್ ಕತ್ತರಿ

ಏ ದಿಲ್ ಹೈ ಮುಷ್ಕಿಲ್‌: ರಣಬೀರ್, ಐಶ್ವರ್ಯ ಹಾಟ್ ಸೀನ್‌ಗಳಿಗೆ ಸೆನ್ಸಾರ್ ಕತ್ತರಿ
ಮುಂಬೈ , ಗುರುವಾರ, 13 ಅಕ್ಟೋಬರ್ 2016 (15:43 IST)
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್‌ಗೆ ಸಂಕಷ್ಟಗಳು ಅಂತ್ಯವಾಗುವಂತೆ ಕಾಣುತ್ತಿಲ್ಲ. ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನದ ನಟ ಫವಾದ್ ಖಾನ್‌ಗೆ ನಟಿಸಲು ಅವಕಾಶ ನೀಡಿದ್ದರಿಂದ ಭಾರಿ ಬೆದರಿಕೆ ಎದುರಿಸಬೇಕಾಗಿ ಬಂದಿತ್ತು.
ಇದೀಗ ಸೆನ್ಸಾರ್ ಮಂಡಳಿ ನಟ ರಣಬೀರ್ ಕಪೂರ್ ಮತ್ತು ಬಾಲಿವುಡ್ ಸುಂದರಿ ಐಶ್ವರ್ಯ ರೈ ನಟಿಸಿರುವ ಚಿತ್ರದಲ್ಲಿನ ಹಾಟ್ ದೃಶ್ಯಗಳಿಗೆ ಕತ್ತರಿ ಹಾಕಿದೆ. ರೋಮಾಂಟಿಕ್ ದೃಶ್ಯಗಳಿಗೆ ಕತ್ತರಿ ಹಾಕಿರುವುದು ಕರಣ್ ಆಕ್ರೋಶಕ್ಕೆ ಕಾರಣವಾಗಿದೆ. 
 
ಏ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿರುವುದು ಕರಣ್ ಜೋಹರ್ ಅಸಮಾಧಾನಕ್ಕೆ ಕಾರಣವಾಗಿದೆ. 
 
ಮೂಲಗಳ ಪ್ರಕಾರ, ಕರಣ್ ಜೋಹರ್, ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಣೆಯ ಸಂದರ್ಭದಲ್ಲಿ ಚಿತ್ರಕ್ಕೆ ಕತ್ತರಿ ಹಾಕದಿರಲು ಖುದ್ದಾಗಿ ಹಾಜರಿದ್ದರು. ಚಿತ್ರ ನಿರ್ಮಾಣ, ಚಿತ್ರಕಥೆಯನ್ನು ಹೊಗಳಿದ ಸೆನ್ಸಾರ್ ಮಂಡಳಿ ಅಧಿಕಾರಿಗಳು ರಣಬೀರ್ ಕಪೂರ್ ಮತ್ತು ಐಶ್ವರ್ಯ ರೈ ಹಾಟ್ ದೃಶ್ಯಗಳು ಎಲ್ಲೆಯನ್ನು ಮೀರಿವೆ ಎಂದು ಕತ್ತರಿ ಹಾಕಿದ್ದಾರೆ. 
 
ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಿದ ಕರಣ್ ಜೋಹರ್, ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವುದರಿಂದ ಚಿತ್ರಕಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು ಯಾರು ಕ್ಯಾರೆ ಎನ್ನಲಿಲ್ಲವಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಕಲೆಗಿಂತ ದೇಶ ದೊಡ್ಡದು: ಪುನೀತ್ ರಾಜಕುಮಾರ್