Select Your Language

Notifications

webdunia
webdunia
webdunia
webdunia

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

King Cinema Shooting, Bollywood Actor Shah Rukh Khan, Golden Tobacco Studio

Sampriya

ಮುಂಬೈ , ಶನಿವಾರ, 19 ಜುಲೈ 2025 (15:10 IST)
Photo Credit X
ಮುಂಬೈ: ಬಹುನಿರೀಕ್ಷಿತ ಕಿಂಗ್‌ ಸಿನಿಮಾ ಶೂಟಿಂಗ್‌ ವೇಳೆ ಬಾಲಿವುಡ್ ಬಾದ್‌ಶಾ ಶಾರುಖ್‌ ಖಾನ್‌ ಅವರು  ಗಾಯಗೊಂಡಿದ್ದಾರೆ. 

ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣ ಮಾಡುವಾಗ ಶಾರುಖ್‌ ಖಾನ್‌  ಬೆನ್ನಿಗೆ ಗಾಯಗೊಂಡಿದ್ದಾರೆ. ಮುಂಬೈನ ಚಿತ್ರೀಕರಣದ ಸ್ಟುಡಿಯೋದಲ್ಲಿ ಘಟನೆ ನಡೆದಿದೆ. 

ಈ ಸಿನಿಮಾ ಶೂಟಿಂಗ್ ಇತ್ತೀಚೆಗೆ ಮುಂಬೈನ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಸದ್ದಿಲ್ಲದೆ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಶಾರುಖ್ ಖಾನ್ ಅವರು ಸ್ಟಂಟ್ ಮಾಡುತ್ತಿದ್ದರು. ಆಗ ಅವರಿಗೆ ಗಾಯವಾಗಿದೆ. 

ಶಾರುಖ್ ಖಾನ್ ಅವರು 2023ರಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟರು. ಪಠಾಣ್, ಜವಾನ್ ಹಾಗೂ ಡಂಕಿ ಸಿನಿಮಾಗಳು ಹಿಟ್ ಆದವು. ಆ ಬಳಿಕ ಶಾರುಖ್ ಖಾನ್ ಯಾವುದೇ ಸಿನಿಮಾನ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ, ಅವರು ಕಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಗೊತ್ತಾಗಿದೆ.  

ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಕಿಂಗ್ ಚಿತ್ರ ಶೂಟಿಂಗ್‌ ನಡೆಯುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಮತ್ತು ಅಭಯ್ ವರ್ಮಾ ಕೂಡ ನಟಿಸಿದ್ದಾರೆ.  

ಶಾರುಖ್‌‌ಗೆ ಗಂಭೀರ ಪೆಟ್ಟಾಗಿಲ್ಲ. ಚೇತರಿಸಿಕೊಳ್ಳುತ್ತಿದ್ದಾರೆ. ಕಿಂಗ್‌ ಖಾನ್‌ ಗಾಯಗೊಂಡಿರುವುದರಿಂದ ಸಿನಿಮಾ ಚಿತ್ರೀಕರಣದಲ್ಲಿ ವಿಳಂಬವಾಗಲಿದೆ. ಚಿತ್ರೀಕರಣದ ವೇಳೆ ಮಗಳು ಕೂಡ ಭಾಗಿಯಾಗಿದ್ದರು.  

Share this Story:

Follow Webdunia kannada

ಮುಂದಿನ ಸುದ್ದಿ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು