Select Your Language

Notifications

webdunia
webdunia
webdunia
webdunia

ಬರುತ್ತಿದೆ `ಪುಷ್ಪಕ ವಿಮಾನ’ ಏರಲು ರೆಡಿಯಾಗಿ

ಬರುತ್ತಿದೆ `ಪುಷ್ಪಕ ವಿಮಾನ’ ಏರಲು ರೆಡಿಯಾಗಿ
Bangalore , ಮಂಗಳವಾರ, 3 ಜನವರಿ 2017 (11:50 IST)
ಅಂದು ಮೂಕಿ `ಪುಷ್ಪಕ ವಿಮಾನ’, ಇಂದು ಮಾತನಾಡುವ `ಪುಷ್ಪಕ ವಿಮಾನ’... ಮನಸ್ಸು ಹಾಗೂ ಹೃದಯ ತಟ್ಟುವ ಸಿನಿಮಾ. ರಮೇಶ್ ಅರವಿಂದ ಅಭಿನಯದ `ಪುಷ್ಪಕ ವಿಮಾನ’ ಚಿತ್ರದಲ್ಲಿ ತಂದೆ ಹಾಗೂ ಮಗಳ ಅವಿನಾಭಾವ ಸಂಬದದ ಸಂದರ್ಭಗಳನ್ನು ಮನಸ್ಸನ್ನು ತಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.
 
ವಿಖ್ಯಾತ್ ಚಿತ್ರ ಬ್ಯಾನರ್ ಅಡಿಯಲ್ಲಿ ವಿಖ್ಯಾತ್, ಸುಕೃತ್, ದೇವೇಂದ್ರ ರಾಜ್ ಗೌಡ, ದೀಪಕ್ ಕಿಶೋರ್, ದೀಪಕ್ ಕೃಷ್ಣ, ವಿಖ್ಯಾತ್ ಮತ್ತಿತರರು ಜೊತೆ ಸೇರಿಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಈ ಪುಷ್ಪಕ ವಿಮಾನ.  48 ದಿವಸಗಳ ಕಾಲ ಬೆಂಗಳೂರು, ಮಂಗಳೂರು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕ ಎಸ್ ರವೀಂದ್ರನಾಥ್. ಸ್ಥಿರ ಚಿತ್ರಗಳಲ್ಲಿ ನಿಪುಣ ಭುವನ್ ಗೌಡ ಅವರ ಛಾಯಾಗ್ರಹಣದ ಕಲೆ ಈ ಚಿತ್ರದ ಟ್ರೈಲರ್‌ನಲ್ಲಿಯೇ ಸಾಬೀತಾಗಿ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
 
ಜನಪ್ರಿಯ ನಟ ರಮೇಶ್ ಅರವಿಂದ್ ಅವರ 100ನೇ ಕನ್ನಡ ಚಿತ್ರ. ಇವರ ಜೊತೆ ಪುಟ್ಟ ಮಗಳಾಗಿ ಬಾಲ ಕಲಾವಿದೆ ಯುವಿನ ಪಾರ್ಥವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುಪ್ರಸಿದ್ಧ 
ನಟಿಯರಾದ ಜೂಹಿ ಚಾವ್ಲ ಈ ಚಿತ್ರದ ಮೂಲಕ ಎರಡೂವರೆ ದಶಕಗಳ ನಂತರ ಕನ್ನಡಕ್ಕೆ ಆಗಮಿಸಿದ್ದಾರೆ. 
 
ರಚಿತ ರಾಮ್, ರವಿ ಕಾಳೆ, ಮನ್‍ದೀಪ್ ರಾಯ್ ತಾರಾಗಣದಲ್ಲಿದ್ದಾರೆ.  ಪುಷ್ಪಕ ವಿಮಾನ ಚಿತ್ರಕ್ಕೆ ಸುರೇಶ್ ಚರಣ್ ರಾಜ್ ಹಾಡುಗಳ ಸಂಯೋಜನೆ ಹಾಗೂ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಗುರುಪ್ರಸಾದ್ ಸಂಭಾಷಣೆ, ಸುರೇಶ್ ಅರ್ಮುಗಮ್ ಅವರ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಶ್ರೀಕಂಠ’ನ ನಿರೀಕ್ಷೆಯಲ್ಲಿ ಶಿವಣ್ಣನ ಅಭಿಮಾನಿಗಳು