ಪುಷ್ಪ 2 ಟೀಸರ್ ಬಿಡುಗಡೆ ದಿನಾಂಕ ಪ್ರಕಟ

Krishnaveni K
ಮಂಗಳವಾರ, 2 ಏಪ್ರಿಲ್ 2024 (16:46 IST)
Photo Courtesy: Twitter
ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಟೀಸರ್ ಬಗ್ಗೆ ಚಿತ್ರತಂಡ ಅಪ್ ಡೇಟ್ ನೀಡಿದೆ.

ಏಪ್ರಿಲ್ 8 ರಂದು ಟೀಸರ್ ಬಿಡುಗಡೆ ಮಾಡುವುದಾಗಿ ವಿಶೇಷ ಪೋಸ್ಟರ್ ಜೊತೆಗೆ ಚಿತ್ರತಂಡ ಪ್ರಕಟಣೆ ನೀಡಿದೆ. ಇಂದು ಬೆಳಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಪುಷ್ಪ 2 ಟೀಸರ್ ಅಪ್ ಡೇಟ್ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಚಿತ್ರತಂಡದ ಘೋಷಣೆಗಾಗಿ ಫ್ಯಾನ್ಸ್ ಕಾದು ಕೂತಿದ್ದರು.

ಕೊನೆಗೂ ಅಭಿಮಾನಿಗಳ ನಿರೀಕ್ಷೆಗೆ ತೆರೆ ಬಿದ್ದಿದೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡ ಪುಷ್ಪ ಲುಕ್ ಒಂದನ್ನು ಹೊರಬಿಡಲಾಗಿದ್ದು, ಟೀಸರ್ ಬಗ್ಗೆ ಮತ್ತಷ್ಟು ಕುತೂಹಲ ಮೂಡುವಂತೆ ಚಿತ್ರತಂಡ ಮಾಡಿದೆ. ಕೆಲವು ಸಮಯದ ಹಿಂದೆ ಚಿತ್ರತಂಡ ಸೀರೆ ಉಟ್ಟಿಕೊಂಡು ಪುಷ್ಪ ಭೀಭತ್ಸ ಅವತಾರದ ಫಸ್ಟ್ ಲುಕ್ ಒಂದನ್ನು ಬಿಡುಗಡೆ ಮಾಡಿತ್ತು.

ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಬರ್ತ್ ಡೇ ಟೀಸರ್ ಬಿಟ್ಟರೆ ಇದುವರೆಗೆ ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಸಿಕ್ಕಿರಲಿಲ್ಲ. ಇದೀಗ ಸಿನಿಮಾದ ಟೀಸರ್ ಬಿಡುಗಡೆಗೆ ಮುಹೂರ್ತ ಕೂಡಿಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BigBoss Season 12: ಕಾವ್ಯಳ ತಂದೆಯ ಮನಸ್ಸು ಕದ್ದ ಗಿಲ್ಲಿಗೆ ಸಿಕ್ತು ದೊಡ್ಡ ಗಿಫ್ಟ್‌

ಸೂರಜ್ ದೊಡ್ಮನೆಯಿಂದ ಹೊರನಡೆದ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ಎಲಿಮಿನೇಟ್‌

ವೀಕೆಂಡ್‌ನಲ್ಲಿ ಸ್ಪರ್ಧಿಗಳಿಗೆ ಬಿಗ್‌ ಶಾಕ್‌, ಸ್ಟ್ರಾಂಗ್ ಸ್ಪರ್ಧಿಯೇ ಮನೆಯಿಂದ ಔಟ್‌

ಪುಪ್ಪ–2 ಕಾಲ್ತುಳಿತ: ಅಲ್ಲು ಅರ್ಜುನ್ ಸೇರಿ 23ಮಂದಿ ವಿರುದ್ಧ ಜಾರ್ಜ್‌ಶೀಟ್

ಮನೆಮಂದಿಯನ್ನು ನೋಡಿ ಖುಷಿಯಲ್ಲಿದ್ದ ಬಿಗ್‌ಬಾಸ್‌ ಸ್ಪರ್ಧಿಗೆ ವೀಕೆಂಡ್‌ನಲ್ಲಿ ಬಿಗ್‌ ಶಾಕ್‌

ಮುಂದಿನ ಸುದ್ದಿ
Show comments