Select Your Language

Notifications

webdunia
webdunia
webdunia
webdunia

ಸಿ.ಆರ್. ಮನೋಹರ್ ಸಹೋದರನ ಭರ್ಜರಿ ಎಂಟ್ರಿ

ಸಿ.ಆರ್. ಮನೋಹರ್ ಸಹೋದರನ ಭರ್ಜರಿ ಎಂಟ್ರಿ
Bangalore , ಬುಧವಾರ, 15 ಫೆಬ್ರವರಿ 2017 (12:20 IST)
ರಾಜಕಾರಣಿ, ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್ ಅವರ ಸಹೋದರ ಬೆಳ್ಳಿಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರದ  ಮೂಲಕ ಇಶಾನ್ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ’ರೋಗ್’ ಎಂದು ಹೆಸರಿಡಲಾಗಿದೆ. 
 
ಖಡಕ್ ಹುಡುಗನ ಕಾದಲ್ ಕಥೆ ಎಂಬುದು ಚಿತ್ರದ ಟ್ಯಾಗ್‌ಲೈನ್. ಕನ್ನಡ ಚಿತ್ರರಂಗಕ್ಕೆ ಅಪ್ಪು ಮತ್ತು ಯುವರಾಜ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ, ದಕ್ಷಿಣ ಭಾರತಕ್ಕೆ ಅನೇಕ ತಾರೆಗಳನ್ನು ಪರಿಚಯಿಸಿರುವ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್‍ನಲ್ಲಿ ಚಿತ್ರ ಮೂಡಿಬರುತ್ತಿದೆ.
 
ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಈ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಹೀರೋ ತಲೆಕೆಳಗಾಗಿ ನೇತಾಡುತ್ತಾ ಕಾಣಿಸಿದ್ದು ಒಂದು ಡಿಫರೆಂಟ್ ಫೀಲ್ ಕೊಡುವಂತಿದೆ. ಸುನಿಲ್ ಕಶ್ಯಪ್ ಸಂಗೀತ ನೀಡುತ್ತಿರುವ ಈ ಚಿತ್ರದ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಿತೆರೆಗೆ ಮತ್ತೆ ಅನಂತ್ ನಾಗ್ ಮತ್ತು ಗೀತಾ ಜೋಡಿ