Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರ, ಕೆಂಪೇಗೌಡ 2 ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಟ್ವಿಟರಿಗರು ಹೇಳಿದ್ದೇನು ಗೊತ್ತಾ?

ಕುರುಕ್ಷೇತ್ರ, ಕೆಂಪೇಗೌಡ 2 ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ಪುನೀತ್ ರಾಜ್ ಕುಮಾರ್ ಗೆ  ಟ್ವಿಟರಿಗರು ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 10 ಆಗಸ್ಟ್ 2019 (09:43 IST)
ಬೆಂಗಳೂರು: ನಿನ್ನೆ ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಮತ್ತು ಕೋಮಲ್ ಅಭಿನಯದ ಕೆಂಪೇಗೌಡ 2 ಸಿನಿಮಾ ಬಿಡುಗಡೆಯಾಗಿತ್ತು.


ಈ ಎರಡೂ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದೇ ತಡ ಅಭಿಮಾನಿಗಳು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.

ಸಿನಿಮಾ ಬಗ್ಗೆ ಟ್ವೀಟ್ ಮಾಡುವ ಬದಲು ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿಗೆ ನೆರವಾಗುವಂತೆ ಮನವಿ ಮಾಡಿ. ಅದರ ಬಗ್ಗೆ ಒಂದೇ ಒಂದು ಮಾತು ಹೇಳಿಲ್ಲವಲ್ಲಾ ಅಪ್ಪು ಸರ್ ಎಂದು ಅಭಿಮಾನಿಗಳು ಬೇಸರದಿಂದಲೇ ಟ್ವೀಟ್ ಮಾಡಿದ್ದರು.

ಇದಾದ ಕೆಲವೇ ನಿಮಿಷಗಳಲ್ಲಿ ಪುನೀತ್ ವಿಡಿಯೋ ಸಂದೇಶ ಪ್ರಕಟಿಸಿದ್ದು, ನೆರೆ ಪೀಡಿತ ಪ್ರದೇಶದ ಜನರಿಗೆ ನೆರವಾಗೋಣ ಎಂದು ಕರೆ ನೀಡಿದ್ದಾರೆ. ಅಲ್ಲದೆ, ನನ್ನಿಂದ ಆದ ಸಹಾಯವನ್ನು ನಾನೂ ಮಾಡ್ತಿದ್ದೀನೆ, ನೀವೂ ನೆರವಾಗಿ ಎಂದು ಕರೆಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗದ ನೆರವು