ಬೆಂಗಳೂರು: ಕರುನಾಡಿನ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ರಾಜ್ಯೋತ್ಸವ ನಿಮಿತ್ತ ಇಂದು ವಿಧಾನಸೌಧದ ಮಹಾಧ್ವಾರದಲ್ಲಿ ಗಣ್ಯರ ಸಮ್ಮುಖದಲ್ಲಿ ಪುನೀತ್ ಗೆ ಕರ್ನಾಟಕರ ರತ್ನ ಬಿರುದು ನೀಡಲಾಗುತ್ತದೆ. ಕರ್ನಾಟಕದ ಪರಮೋನ್ನತ ಪ್ರಶಸ್ತಿ ಸ್ವೀಕರಿಸುತ್ತಿರುವ 10 ನೆಯ ಗಣ್ಯ ಪುನೀತ್ ಆಗಲಿದ್ದಾರೆ. ಇದಕ್ಕೆ ಮೊದಲು ಡಾ. ರಾಜ್ ಕುಮಾರ್ ಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು.
ಇಂದಿನ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ, ಸೂಪರ್ ಸ್ಟಾರ್ ರಜನೀಕಾಂತ್, ತೆಲುಗು ಸ್ಟಾರ್ ನಟ ಜ್ಯೂ.ಎನ್ ಟಿಆರ್ ವಿಶೇಷ ಅತಿಥಿಗಳಾಗಿರುತ್ತಾರೆ. ಜೊತೆಗೆ ಸ್ಯಾಂಡಲ್ ವುಡ್ ಕಲಾವಿದರು, ರಾಜಕೀಯ ಗಣ್ಯರು, ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
-Edited by Rajesh Patil