Webdunia - Bharat's app for daily news and videos

Install App

ತಮಿಳಿನ ಪೂಜೈ ರಿಮೇಕ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್

Webdunia
ಗುರುವಾರ, 24 ನವೆಂಬರ್ 2016 (11:22 IST)
ಬೆಂಗಳೂರು: ರಾಜಕುಮಾರ ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ ಯಾವ ಚಿತ್ರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತಮಿಳಿನ ಸೂಪರ್ ಹಿಟ್ ಚಿತ್ರ ಪೂಜೈ ಸಿನಿಮಾದ ರಿಮೇಕ್ ನಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ  ಸುದ್ದಿ ಬಂದಿದೆ.

ಮುಕುಂದ ಮುರಾರಿ ಸಿನಿಮಾದ ಯಶಸ್ಸಿನಿಂದ ಹಿಗ್ಗಿರುವ ನಿರ್ಮಾಪಕರಾದ ಜಯಶ್ರೀ ದೇವಿ ಮತ್ತು ಎಂ.ಎನ್. ಕುಮಾರ್ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ನೃತ್ಯ ನಿರ್ದೇಶಕರಾಗಿ ನಂತರ ಫುಲ್ ಟೈಂ ನಿರ್ದೇಶಕರಾಗಿ ಯಶಸ್ವಿಯಾದ ಹರ್ಷ ನಿರ್ದೇಶನ ಮಾಡಲಿದ್ದಾರೆ.

ಈಗಾಗಲೇ ದೊಡ್ಮನೆಯ ದೊಡ್ಡ ಮಗ ಶಿವರಾಜ್ ಕುಮಾರ್ ಅವರ ಎರಡು ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾದ ಹರ್ಷ ಈಗ ಪುನೀತ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದು ತಮಿಳಿನ ಪೂಜೈ ಸಿನಿಮಾದ ರಿಮೇಕ್. ಆ ಸಿನಿಮಾವನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಿದ್ದಾರಂತೆ.

ಅಂದ ಹಾಗೆ ಈ ಚಿತ್ರದಲ್ಲಿ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುವುದೆಂಬ ಸುದ್ದಿ ಹರಡಿತ್ತು. ಅದು ಎಷ್ಟು ನಿಜವೊ ಸುಳ್ಳೋ ಗೊತ್ತಿಲ್ಲ. ದರ್ಶನ್ ಜಾಗಕ್ಕೆ ಪುನೀತ್ ಬಂದಿರುವುದಂತೂ ಸತ್ಯ. ಉಳಿದ ಪಾತ್ರ ವರ್ಗದವರ ಡೀಟೈಲ್ಸ್ ಸದ್ಯದಲ್ಲೇ ನಿರೀಕ್ಷಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಮುಂದಿನ ಸುದ್ದಿ
Show comments